ಬೆಂಗಳೂರು: ಹಾಲು ಉತ್ಪಾದಕ ರೈತರಿಂದ ಖರೀದಿಸುವ ಹಾಲಿನ ದರ ಕಡಿತವಿಲ್ಲ, ಯಥಾಸ್ಥಿತಿ ಮುಂದುವರೆಯಲಿದೆ.
ಹಾಲಿನ ದರವನ್ನು ಲೀಟರ್ಗೆ 1.50 ರೂ. ಕಡಿತಗೊಳಿಸಿದ ಆದೇಶವನ್ನು ಹಿಂಪಡೆದುಕೊಂಡು ಮೊದಲಿನಂತೆಯೇ ಪ್ರತಿ ಲೀಟರ್ಗೆ 34 ರೂಪಾಯಿ ಖರೀದಿ ದರ ನೀಡುವಂತೆ ಕೆಎಂಎಫ್ ವತಿಯಿಂದ ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ ನಿರ್ದೇಶನ ನೀಡಲಾಗಿದೆ.
ಜೂನ್ 1 ರಿಂದ ಅನ್ವಯವಾಗುವಂತೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರವನ್ನು 1.50 ರೂ. ಕಡಿತ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಕೆಎಂಎಫ್ ಗೆ ಸೂಚನೆ ನೀಡಿ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ದರ ಕಡಿತ ಆದೇಶ ಹಿಂಪಡೆಯಬೇಕು. ಹಾಲು ಖರೀದಿ ದರ ಕಡಿತಗೊಳಿಸಬಾರದು ಎಂದು ಸೂಚನೆ ನೀಡಿದ್ದರು. ಅಂತೆಯೇ ಹಾಲು ಖರೀದಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಕೆಎಂಎಫ್ ಸೂಚಿಸಿದೆ.