ನವದೆಹಲಿ: ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಟಿಕೆಟ್ ಮೇಲಿನ ಇಂಧನ ಶುಲ್ಕ ಕೈಬಿಟ್ಟಿರುವುದಾಗಿ ಗುರುವಾರ ತಿಳಿಸಿದೆ.
ವಿಮಾನಯಾನ ಟರ್ಬೈನ್ ಇಂಧನ ದರ(ಎಟಿಎಫ್) ಬೆಲೆಗಳಲ್ಲಿ ಇತ್ತೀಚೆಗೆ ಇಳಿಕೆಯಾಗಿದ್ದು, ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಟಿಕೆಟ್ ನಿಂದ ಮೇಲಿನ ಇಂಧನ ಶುಲ್ಕ ತೆಗೆದಿರುವುದಾಗಿ ಇಂಡಿಗೋ ತಿಳಿಸಿದೆ. ಇದರಿಂದಾಗಿ ವಿಮಾನಯಾನ ಟಿಕೆಟ್ ದರ ಕಡಿಮೆಯಾಗಲಿದೆ.
ಇಂಡಿಗೋ ದೇಶಿಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಿಗೆ ಅನ್ವಯವಾಗುವಂತೆ ಇಂಧನ ಶುಲ್ಕ ತೆಗೆದು ಹಾಕಿದೆ. ಎಟಿಎಫ್ ಬೆಲೆಯಲ್ಲಿ ಹೆಚ್ಚಳ ಉಂಟಾದ ಹಿನ್ನೆಲೆಯಲ್ಲಿ 2023ರ ಅಕ್ಟೋಬರ್ 6ರಂದು ಇಂಧನ ಶುಲ್ಕ ಪರಿಚಯಿಸಲಾಗಿತ್ತು. ಎಟಿಎಫ್ ಬೆಲೆಗಳ ಆಧರಿಸಿ, ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಯಾವುದೇ ಬದಲಾವಣೆಗೆ ಪ್ರತಿಕ್ರಿಯಿಸಲು ದರಗಳನ್ನು ಸರಿಹೊಂದಿಸುವುದನ್ನು ಮುಂದುವರಿಸಲಾಗುವುದು ಎಂದು ಹೇಳಲಾಗಿದೆ.
ಎಟಿಎಫ್ ಬೆಲೆ ಕಡಿತದ ನಂತರ ದೇಶೀಯ, ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲಿನ ಇಂಧನ ಹೆಚ್ಚುವರಿ ಶುಲ್ಕವನ್ನು ಇಂಡಿಗೋ ಮನ್ನಾ ಮಾಡಿದೆ.
ಇಂಡಿಗೋ ಗುರುವಾರ ಜೆಟ್ ಇಂಧನ ಬೆಲೆಗಳಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ಲೆವಿಯನ್ನು ಪರಿಚಯಿಸಿದ ಸುಮಾರು ಮೂರು ತಿಂಗಳ ನಂತರ ಟಿಕೆಟ್‌ಗಳ ಮೇಲೆ ಇಂಧನ ಶುಲ್ಕವನ್ನು ಸಂಗ್ರಹಿಸುವುದನ್ನು ನಿಲ್ಲಿಸಿದೆ ಎಂದು ಹೇಳಿದೆ. ಅಕ್ಟೋಬರ್ 2023 ರ ಆರಂಭದಲ್ಲಿ ಏರ್‌ಲೈನ್ ಪರಿಚಯಿಸಿದ ಇಂಧನ ಶುಲ್ಕವನ್ನು ಗುರುವಾರದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಎಟಿಎಫ್(ಏವಿಯೇಷನ್ ಟರ್ಬೈನ್ ಫ್ಯುಯೆಲ್) ಬೆಲೆಗಳಲ್ಲಿ ಇತ್ತೀಚಿನ ಇಳಿಕೆಯಿಂದಾಗಿ ಇಂಧನ ಶುಲ್ಕವನ್ನು ಹಿಂಪಡೆಯಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.