ನವದೆಹಲಿ: ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಬಿಪಿಎಲ್ ಸಮುದಾಯದವರಿಗೆ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್ ದರ ನೆರೆಹೊರೆ ದೇಶಗಳಿಗಿಂತ ಭಾರಿ ಕಡಿಮೆ ಇದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿ, ಪಾಕಿಸ್ತಾನದಲ್ಲಿ ಪ್ರತಿ ಸಿಲಿಂಡರ್ ದರ 1059 ರೂ., ಶ್ರೀಲಂಕಾದಲ್ಲಿ 1033 ರೂ., ನೇಪಾಳದಲ್ಲಿ 1,198 ರೂ. ಇದೆ. ಭಾರತದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆಜಿ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.