ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಚೇತನ್ ನಾಯಕ್ ಹಾಗೂ ಸುಮೇದ್ ಕೆ ಈ ಹಾಡಿಗೆ ಧ್ವನಿಯಾಗಿದ್ದು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ ಇನ್ನುಳಿದಂತೆ ಸುಮೇದ್ ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರವನ್ನು ತನು ಟಾಕೀಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಆಕಾಶ್ ರಾಂಬೊ ಸೇರಿದಂತೆ ಸ್ನೇಹಾ ಖುಷಿ, ಸಂಹಿತಾ ವಿನಯ, ಧೀರೇಂದ್ರ ಎಸ್, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಾಯಿ ಪವನಕುಮಾರ್ ಎಂ, ಪಾಲ್ಟಿ ಗೋವಿಂದ್, ಮಹಾಲಕ್ಷ್ಮಿ ವಿ ಬಣ್ಣ ಹಚ್ಚಿದ್ದಾರೆ. ಮನು ಮತ್ತು ಸ್ವರಾಜ್ ಪತ್ರಿಮಠ್ ಅವರ ಸಂಕಲನ, ರವಿವರ್ಮ ಛಾಯಾಗ್ರಹಣ, ಹಾಗೂ ಐಶ್ವರ್ಯ ರಮೇಶ್ ಮತ್ತು ವರ್ಷ ಅಮರನಾಥ್ ಅವರ ನೃತ್ಯ ನಿರ್ದೇಶನವಿದೆ.