ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….!

ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಇಷ್ಟೆಲ್ಲಾ ಕಠಿಣ ಕಾನೂನುಗಳಿದ್ದರೂ ಸಹ ಭಾರತದಲ್ಲಿ ವರದಕ್ಷಿಣೆಯ ಪರಿಪಾಠ ಢಾಳವಾಗೇ ಸಾಗುತ್ತಿದೆ.

ರಾಜಸ್ಥಾನದ ನಾಗೌರ್‌‌‌ ಜಿಲ್ಲೆಯ ಧಿಂಗ್ಸಾರಾ ಗ್ರಾಮದಲ್ಲಿ ನಾಲ್ಕು ಮಂದಿ ಸಹೋದರರು ತಮ್ಮ ಸಹೋದರಿಯ ವಿವಾಹದಂದು 8 ಕೋಟಿ 31 ಲಕ್ಷ ರೂ.ಗಳ ವರದಕ್ಷಿಣೆ ಕೊಟ್ಟು ಸುದ್ದಿಯಲ್ಲಿದ್ದಾರೆ.

ಮಯ್ರಾ ಎಂದು ಕರೆಯಲಾಗುವ ಈ ಪದ್ಧತಿ ನಾಗೌರ್‌ ಜಿಲ್ಲೆಯಲ್ಲಿ ವಿಪರೀತವಾಗಿದೆ. ಆದರೆ ಈ ನಾಲ್ವರು ಸಹೋದರರು ಭಾರೀ ಪ್ರಮಾಣದ ವರದಕ್ಷಿಣೆ ನೀಡುವ ಮೂಲಕ ದೊಡ್ಡ ಸದ್ದು ಮಾಡಿದ್ದಾರೆ. ಅರ್ಜುನ್ ರಾಮ್‌ ಮೆಹಾರಿಯಾ, ಭಗೀರತ್‌ ಮೆಹಾರಿಯಾ, ಉಮೇಯ್ದ್‌ ಜೀ ಮೆಹಾರಿಯಾ ಹಾಗೂ ಪ್ರಹ್ಲಾದ ಮೆಹಾರಿಯಾ ಮಾರ್ಚ್ 26ರಂದು ತಮ್ಮ ಸಹೋದರಿ ಭನ್ವಾರಿ ದೇವಿಯ ಮದುವೆಯಂದು ಈ ಭಾರೀ ಮೊತ್ತದ ವರದಕ್ಷಿಣೆ ಕೊಟ್ಟಿದ್ದಾರೆ.

ಈಟಿವಿ ಭಾರತ್‌‌ ವರದಿ ಪ್ರಕಾರ, ಈ ವರದಕ್ಷಿಣೆಗೆ 2.21 ಕೋಟಿ ನಗದು, 100 ಭಿಗಾ ಜಮೀನು (ನಾಲ್ಕು ಕೋಟಿ ರೂ. ಬೆಲೆ ಬಾಳುತ್ತದೆ), ಬೇರೊಂದು ಊರಿನಲ್ಲಿ 1 ಭಿಗಾ ಜಮೀನು, 71 ಲಕ್ಷ ರೂ.ನಷ್ಟು ಬೆಲೆ ಬಾಳುವ ಒಂದು ಕೆಜಿ ಚಿನ್ನ, 9.8 ಲಕ್ಷ ರೂ. ನಷ್ಟು ಮೌಲ್ಯದ ಬೆಳ್ಳಿಯನ್ನು ನೀಡಲಾಗಿದೆ. ಮಿಕ್ಕಂತೆ 800 ನಾಣ್ಯಗಳನ್ನು ಗ್ರಾಮಸ್ಥರೆಲ್ಲಾ ಹಂಚಿಕೊಂಡಿದ್ದಾರೆ. ಇದೇ ವೇಳೆ 7 ಲಕ್ಷ ರೂ. ಬೆಲೆಯ ಟ್ರಾಕ್ಟರ್‌ ಅನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಜೊತೆಗೆ ಒಂದು ಸ್ಕೂಟರ್‌ ಹಾಗೂ ಕೆಲ ವಾಹನಗಳನ್ನು ಸಹ ಇದೇ ವೇಳೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read