ರಾಜ್ಯದ ರೈತರಿಗೆ ಸಿಹಿ ಸುದ್ದಿ: ಪೋಡಿ ದುರಸ್ತಿ ಅಭಿಯಾನ, ಜಮೀನು ಸರ್ವೆಗೆ ಮಹತ್ವದ ಕ್ರಮ

ಬೆಂಗಳೂರು: 30 ವರ್ಷಕ್ಕೂ ಅಧಿಕ ಅವಧಿಯಿಂದ ಮಂಜೂರಾದ ಸರ್ಕಾರಿ ಜಮೀನುಗಳು ಪೋಡಿ ಆಗದೆ ಲಕ್ಷಾಂತರ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪೋಡಿ ದರಸ್ತಿ ಅಭಿಯಾನ ಆರಂಭಿಸಿದೆ.

ಈ ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಸೂಚನೆ ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ತಹಶೀಲ್ದಾರ್ ಗಳೊಂದಿಗೆ ಬಗರ್ ಹುಕುಂ ಮತ್ತು ನಮೂನೆ 1ರಿಂದ 5ರ ದುರಸ್ತಿ ಕಾರ್ಯಗಳ ಪ್ರಗತಿ ಕುರಿತಾಗಿ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದ್ದಾರೆ.

ಇದುವರೆಗೆ ಪೋಡಿ ದುರಸ್ತಿ ಅಭಿಯಾನದಡಿ 29,778 ಸರ್ವೇ ನಂಬರ್ ಗಳಿಗೆ 1ರಿಂದ 5ಕಡತ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 11,436 ರೈತರ ಜಮೀನು ಸರ್ವೆಗೆ ಆದೇಶಿಸಲಾಗಿದೆ. ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಆದೇಶಿಸಲು ಕ್ರಮ ಕೈಗೊಳ್ಳಬೇಕು. ದಶಕಗಳಿಂದ ಬಾಕಿ ಇದ್ದ ರೈತರ ಪೋಡಿ ದುರಸ್ತಿ ಸಮಸ್ಯೆ ಬಗೆಹರಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ತಹಶೀಲ್ದಾರ್ ಕೋರ್ಟ್ ಗಳಲ್ಲಿರುವ ಭೂಮಿ ವ್ಯಾಜ್ಯಗಳನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಬಗರ್ ಹುಕುಂ ಸಾಗುವಳಿ ಸಂಬಂಧ ಅರ್ಹ ರೈತರ ಅರ್ಜಿಗಳನ್ನು ಶಾಸಕರ ನೇತೃತ್ವದ ಸಮಿತಿಗಳಿಗೆ ಫೆಬ್ರವರಿ ಅಂತ್ಯದೊಳಗೆ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read