ಮನೆಗೆ ಬರುವ ಮೊದಲು ‘ಲಕ್ಷ್ಮಿ’ ನೀಡ್ತಾಳೆ ಈ ಸಂಕೇತ

ಪ್ರತಿಯೊಬ್ಬರು ಲಕ್ಷ್ಮಿಯನ್ನು ಪೂಜೆ ಮಾಡ್ತಾರೆ. ಲಕ್ಷ್ಮಿ ಧನ, ಸಂಪತ್ತನ್ನು ನೀಡ್ತಾಳೆ. ಧನವಿದ್ರೆ ಬದುಕಿಗೊಂದು ಅರ್ಥ. ಸಂಪತ್ತಿರುವವನ ಕೈನಲ್ಲಿ ಎಲ್ಲವೂ ಇರುತ್ತದೆ. ಸಂಪತ್ತಿಲ್ಲದವನ ಕೈನಲ್ಲಿ ಏನೂ ಇರುವುದಿಲ್ಲ.

ಪ್ರಪಂಚದಲ್ಲಿ ಸುಖ-ಸಮೃದ್ಧಿಯಿಂದ ಬದುಕಲು ಸಂಪತ್ತು ಅವಶ್ಯಕ. ಇದಕ್ಕೆ ತಾಯಿ ಲಕ್ಷ್ಮಿ ಕೃಪೆ ಬೇಕೆಂದು ನಂಬಲಾಗಿದೆ. ತಾಯಿ ಲಕ್ಷ್ಮಿ ಸದಾ ಮನೆಯಲ್ಲಿರಲಿ ಎಂದು ಎಲ್ಲರೂ ಬಯಸ್ತಾರೆ. ಮನೆಗೆ ಪ್ರವೇಶ ಮಾಡುವ ಮೊದಲು ತಾಯಿ ಕೆಲ ಸಂಕೇತ ನೀಡ್ತಾಳೆ.

ಲಕ್ಷ್ಮಿಯ ವಾಹನ ಗೂಬೆ. ಇದನ್ನು ನೋಡಿದ ವ್ಯಕ್ತಿ ಮನೆಗೆ ಲಕ್ಷ್ಮಿ ಅವಶ್ಯಕವಾಗಿ ಬರ್ತಾಳೆ ಎಂಬ ನಂಬಿಕೆಯಿದೆ. ವಾಹನ ಗೂಬೆ ಹಿಂದೆ ಲಕ್ಷ್ಮಿ ಬರ್ತಾಳಂತೆ. ಗೂಬೆಯನ್ನು ನೋಡಿದ ವ್ಯಕ್ತಿ ಮನೆಗೆ ಲಕ್ಷ್ಮಿ ಶೀಘ್ರವೇ ಪ್ರವೇಶ ಮಾಡ್ತಾಳೆ ಎಂದರ್ಥ.

ಕೆಲವರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಗಂಟೆ ಅಥವಾ ಶಂಖದ ದನಿ ಕೇಳಿದ್ರೆ ಲಕ್ಷ್ಮಿ ಕೃಪೆ ನಮ್ಮ ಮೇಲಿದೆ ಎಂದರ್ಥ. ಆದಷ್ಟು ಬೇಗ ಲಕ್ಷ್ಮಿ ನಮ್ಮ ಮನೆ ಪ್ರವೇಶ ಮಾಡ್ತಾಳೆ. ಶೀಘ್ರವೇ ಶ್ರೀಮಂತಿಕೆ ಬರಲಿದೆ ಎಂಬುದು ಜನರ ನಂಬಿಕೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read