ಚೆಕ್‌ ಬರೆಯುವಾಗ ಲಕ್ಷಕ್ಕೆ Lakh ಅಥವಾ Lac ಯಾವುದನ್ನು ಬಳಸಬೇಕು ? ಇದಕ್ಕೆ ಇಲ್ಲಿದೆ ಉತ್ತರ

ಚೆಕ್ ಬರೆಯುವ ವಿಷಯಕ್ಕೆ ಬಂದರೆ, ಸಣ್ಣ ತಪ್ಪು ಕೂಡ ಕೆಲವೊಮ್ಮೆ ವಹಿವಾಟಿನ ರದ್ದತಿಗೆ ಕಾರಣವಾಗಬಹುದು. ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್‌ನ ವ್ಯಾಪಕ ಬಳಕೆಯ ಹೊರತಾಗಿಯೂ, ವಿಶೇಷವಾಗಿ ದೊಡ್ಡ ವಹಿವಾಟುಗಳಿಗೆ ಬಹುತೇಕರು ಇನ್ನೂ ಚೆಕ್‌ಗಳನ್ನು ಬಳಸಸುತ್ತಾರೆ. ಹೀಗಾಗಿ ಚೆಕ್‌ ಬರೆಯುವ ಸಂದರ್ಭದಲ್ಲಿ ಯಾವುದೇ ತಪ್ಪುಗಳಾಗದಂತೆ ನೋಡಬೇಕಾಗುತ್ತದೆ.

ಲಕ್ಷಗಳ ವಹಿವಾಟಿನ ಸಂದರ್ಭದಲ್ಲಿ ಇದನ್ನು ಬರೆಯುವಾಗ ಒಂದಷ್ಟು ಗೊಂದಲ ಉಂಟಾಗುತ್ತದೆ. ಉದಾಹರಣೆಗೆ, ನೀವು ರೂ. 10,00,000 (10 ಲಕ್ಷ) ಬರೆಯಬೇಕಾದರೆ, ಸಂಖ್ಯೆಯಲ್ಲಿ ನಮೂದಿಸುವುದು ಸರಿಯಾಗಿದ್ದರೂ, ಮೊತ್ತವನ್ನು ಪದಗಳಲ್ಲಿ ಬರೆಯುವಾಗ “LAKH” ಅಥವಾ “LAC” ಬಳಸಬೇಕೇ ? ಎಂಬ ಗೊಂದಲ ಕಾಡುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಸರಿಯಾದ ಪದವು “LAKH” ಆಗಿದೆ. RBI ಮಾರ್ಗಸೂಚಿಗಳು ಚೆಕ್ ಗಳನ್ನು ಬರೆಯುವಾಗ ಇಂಗ್ಲಿಷ್ ನಲ್ಲಿ ‘LAKH’ ಪದವನ್ನು ಬಳಸಬೇಕೆಂದು ಹೇಳುತ್ತದೆ. ಇದು RBI ವೆಬ್‌ಸೈಟ್‌ನಲ್ಲಿ ಕಂಡುಬರುವ ಪದವಾಗಿದೆ.

ಹಾಗೆಂದು “LAKH” ಬದಲಿಗೆ “LAC” ಅನ್ನು ಬಳಸಿದ ಕಾರಣಕ್ಕೆ ಚೆಕ್‌ ಅಮಾನ್ಯಗೊಂಡಿರುವ ಯಾವುದೇ ಪ್ರಕರಣಗಳು ನಡೆದಿಲ್ಲ ಎನ್ನಲಾಗಿದ್ದು, LAKH ಬಳಸಿದರೆ ಸೂಕ್ತ. ಇನ್ನು ‘LAC’ ಎಂಬ ಪದವು ಸೀಲಿಂಗ್ ಅಥವಾ ವಾರ್ನಿಷ್ ಮಾಡಲು ಬಳಸುವ ವಸ್ತುವಿನೊಂದಿಗೆ ಜೋಡಣೆಯಾಗುವ ಕಾರಣ ಇದು ಗೊಂದಲವನ್ನು ಉಂಟುಮಾಡಬಹುದು. ದೈನಂದಿನ ಭಾಷೆಯಲ್ಲಿ, ‘LAC’ ಅನ್ನು ‘LAKH’ ಉಲ್ಲೇಖಿಸಲು ಬಳಸಬಹುದು, ಆದರೆ ಬ್ಯಾಂಕಿಂಗ್ ವ್ಯವಹಾರಗಳ ಸಂದರ್ಭದಲ್ಲಿ ‘LAKH’ ಎಂಬುದು ಹೆಚ್ಚು ಸೂಕ್ತ ಮತ್ತು ಆದ್ಯತೆಯ ಪದವಾಗಿದೆ.

ಆದ್ದರಿಂದ, ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸಲು, ಚೆಕ್ ಅನ್ನು ನೀಡುವಾಗ ‘LAKH’ ಎಂದು ಬರೆಯಲು ಸಲಹೆ ನೀಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read