ಸಾಕಿ ಸಲಹಿದ ಆನೆಯಿಂದಲೇ ಜಲ ಸಮಾಧಿಯಾದ ಕಾವಾಡಿಗ

ಬೆಂಗಳೂರು: ಆನೆ ಮೇಲೆ ಕುಳಿತು ಮೈ ತೊಳೆಯುವ ವೇಳೆ ಏಕಾಏಕಿಯ ಆನೆ ಆಳದ ನೀರಿನೊಳಗೆ ಇಳಿದ ಪರಿಣಾಮ ಮೇಲೆ ಕುಳಿತಿದ್ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ಮಾರ್ಗದ ಸಿಗೇಕಟ್ಟೆ ಕೆರೆಯಲ್ಲಿ ನಡೆದಿದೆ.

ಜೇನು ಕುರುಬ ಸಮುದಾಯಕ್ಕೆ ಸೇರಿದ ಮೈಸೂರು ಜಿಲ್ಲೆ ಹುಣಸೂರು ಮೂಲದ ಗೋಪಾಲ್(20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು ಎರಡು ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ. ಬುಧವಾರ ಬೆಳಗ್ಗೆ ಆನೆ ಮೈತೊಳೆಯುವ ಸಮಯದಲ್ಲಿ ಗಾಬರಿಯಾದ ಆನೆ ಕೆರೆಯ ಆಳದ ಭಾಗ ಚಲಿಸಿದೆ. ಈಜು ಬಾರದ ಗೋಪಾಲ್ ಆಳದ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಅಣ್ಣ ಕೃಷ್ಣಕುಮಾರ್, ಮಾವುತ ಸಂಜೇಶ್ ಅವರು ರಕ್ಷಿಸಲು ಹರಸಾಹಸ ನಡೆಸಿದರೂ ಪ್ರಯತ್ನ ಕೈಗೂಡಿಲ್ಲ. ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾರೆ.

ಮಾಹಿತಿ ತಿಳಿದು ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯಪಾಲಕ ನಿರ್ವಾಹಕ ನಿರ್ದೇಶ ವಿಶಾಲ್ ಸೂರ್ಯಸೇನ್  ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮುಳುಗು ತಜ್ಞರು, ಅಗ್ನಿಶಾಮಕ ದಳ ಸಿಬ್ಬಂದಿ, ಮೂರು ಗಂಟೆ ಕಾರ್ಯಾಚರಣೆ ನಡೆಸಿ ಗೋಪಾಲ್ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೆರೆಯಲ್ಲಿ ಎರಡು ಮೊಸಳೆಗಳಿದ್ದರೂ ಮೃತ ದೇಹಕ್ಕೆ ಹಾನಿ ಮಾಡಿಲ್ಲ.

ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಶಾಲ್ ಸೂರ್ಯಸೇನ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read