ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿಯರ ರಕ್ಷಿಸಿದ ಬಸ್ ಚಾಲಕ

ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿಯರನ್ನು ಬಸ್ ಚಾಲಕ ರಕ್ಷಿಸಿದ ಘಟನೆ ಶಿರಾ ಸಮೀಪದ ಹಂದಿಕುಂಟೆ ಗ್ರಾಮದಲ್ಲಿ ನಡೆದಿದೆ.

ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ್ ಅವರು ಹೆಣ್ಣುಮಕ್ಕಳನ್ನು ರಕ್ಷಿಸಿ ಮಾನವೀಯತೆ ತೋರಿದ್ದಾರೆ. ಶಿರಾ ಘಟಕದ ಬಸ್ ಚಾಲಕರಾಗಿರುವ ಮಂಜುನಾಥ್ ಶಿರಾ ಮಾರ್ಗವಾಗಿ ಬಸ್ ಚಾಲನೆ ಮಾಡಿಕೊಂಡು ಬರುವಾಗ ಕೆರೆಯಲ್ಲಿ ಬಾಲಕಿಯರು ಮುಳುಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸಿದ ಅವರು ಓಡಿ ಹೋಗಿ ಕೆರೆಗೆ ಜಿಗಿದು ಇಬ್ಬರನ್ನು ನೀರಿನಿಂದ ಹೊರ ತಂದು ಕಾಪಾಡಿದ್ದಾರೆ. ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಸಹೋದರಿಯರು ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದು, ಇದೇ ಮಾರ್ಗವಾಗಿ ತೆರಳುತ್ತಿದ್ದ ಮಂಜುನಾಥ್ ಅವರನ್ನು ಗಮನಿಸಿ ರಕ್ಷಿಸಿದ್ದಾರೆ.

ಮಂಜುನಾಥ್ ಅವರ ಸಮಯ ಪ್ರಜ್ಞೆಯಿಂದ ಬಾಲಕಿಯರು ಬದುಕುಳಿದಿದ್ದಾರೆ. ಅವರ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನಿಗಮದ ಅಧಿಕಾರಿಗಳು ಸನ್ಮಾನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read