ನಾಗಪಟ್ಟಣಂ: ಮಹಿಳಾ ಇನ್ಸ್ ಪೆಕ್ಟರ್ ಓರ್ವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
29 ವರ್ಷದ ಅಭಿನಯ ಮೃತ ಮಹಿಳಾ ಇನ್ಸ್ ಪೆಕ್ಟರ್. ಮೈಲಾಡುತುರೈ ಜಿಲ್ಲೆಯ ಮನಕುಡಿ ನಿವಾಸಿ. ಸಶಸ್ತ್ರ ಮೀಸಲುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ರಾತ್ರಿ ಕಲೆಕ್ಟರೇಟ್ ನಲ್ಲಿ ಅವರನ್ನು ಕರ್ತವ್ಯಕ್ಕೆ ನೇಮಿಸಲಗಿತ್ತು. ಅವರೊಂದಿಗೆ ಮತ್ತೋರ್ವ ಮಹಿಳಾ ಕನ್ಸ್ ಟೇಬಲ್ ಕೂಡ ಇದ್ದರು. ಆದರೆ ಈಗ ಜಿಲ್ಲಾಧಿಕರಿ ಕಚೇರಿಯಲ್ಲಿಯೇ ಅವರು ಶವವಾಗಿ ಪತ್ತೆಯಾಗಿದ್ದಾರೆ. ಮೃತ ಅಭಿನಯ ಅವರ ಕತ್ತಿನ ಭಾಗದಲ್ಲಿ ಗುಂಡೇಟಿನ ಗುರುತು ಪತ್ತೆಯಾಗಿದೆ.
ಭಾನುವಾರ ಬೆಳಿಗ್ಗೆ 6ಗಂಟೆ ವೇಳೆಗೆ ಕಚೇರಿ ಆವರಣದಲ್ಲಿ ಗುಂಡೇಟಿನ ಶಬ್ಧ ಕೇಳಿತ್ತು. ಕರ್ತವ್ಯದಲ್ಲಿದ್ದ ಮತ್ತೋರ್ವ ಕಾನ್ಸ್ ಟೇಬಲ್ ಸ್ಥಳಕ್ಕೆ ತೆರಳಿ ನೋಡುವಷ್ಟರಲ್ಲಿ ಇನ್ಸ್ ಪೆಕ್ಟರ್ ಅಭಿನಯ ನೆಲದ ಮೇಲೆ ಬಿದ್ದಿದ್ದರು. ಅವರ ಕತ್ತಿನ ಎಡಭಾಗದಲ್ಲಿ ಗುಂಡೇಟಿನ ಗುರುತು ಪತ್ತೆಯಾಗಿದೆ.
ಅಭಿನಯ ಅವರ ಮೃತದೇಹನ್ನು ನಾಗಪಟ್ಟಣಂ ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ರವಾನಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ. ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.