ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದಿದ ದೇಗುಲಗಳಲ್ಲಿ ನಂ. 1 ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 123 ಕೋಟಿ ರೂ. ಸಂಗ್ರಹ

ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮತ್ತು ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿದ ಮುಜರಾಯಿ ದೇಗುಲಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 2022 -23ನೇ ಸಾಲಿನಲ್ಲಿ 123.64 ಕೋಟಿ ರೂಪಾಯಿ ಆದಾಯ ಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಕಡಿಮೆ ಆದಾಯ ಬಂದಿತ್ತು. 2019-20 ನೇ ಸಾಲಿನಲ್ಲಿ 98.92 ಕೋಟಿ ರೂ., 2020 -2021 ರಲ್ಲಿ 68.94 ಕೋಟಿ ರೂ., 2021 -22 ರಲ್ಲಿ 72.73 ಕೋಟಿ ರೂ. ಆದಾಯ ಗಳಿಸಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಸಕ್ತ ಆರ್ಥಿಕ ವರ್ಷದಲ್ಲಿ 123 ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದೆ. ಕೊರೋನಾ ಕಾರಣದಿಂದಾಗಿ ಕಡಿಮೆಯಾಗಿದ್ದ ಆದಾಯ ಈ ಬಾರಿ ಏರಿಕೆ ಕಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read