ಬೈಕ್ ಪ್ರಿಯರಿಗಾಗಿ ಬಂದಿದೆ KTM 990 Duke; ಇಲ್ಲಿದೆ ಹೊಸ ಬೈಕ್‌ ವಿಶೇಷತೆ

ಮೋಟಾರ್‌ ಸೈಕಲ್‌ ಪ್ರಿಯರಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ. ಅದಕ್ಕೀಗ ಹೊಸ ಸೇರ್ಪಡೆ ಕೆಟಿಎಂ 990 ಡ್ಯೂಕ್ ಬೈಕ್. 890 ಡ್ಯೂಕ್ ಬದಲು ಬಂದಿರುವ ಹೊಸ ಮೋಟಾರ್‌ ಸೈಕಲ್‌ ಇದು. ಹೊಸ 990 ಡ್ಯೂಕ್ ಬೈಕ್‌, ಕೆಟಿಎಂ ಕಂಪನಿಯ ಮಧ್ಯಮ ತೂಕದ ಮೋಟಾರ್‌ಸೈಕಲ್. ಹೊಸ 990 ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಹಳೆಯ ಮಾದರಿ ಕೂಡ ಖರೀದಿದಾರರಿಗೆ ಲಭ್ಯವಿದೆ.

KTM 990 ಡ್ಯೂಕ್ ವಿನ್ಯಾಸ

ಹೊಸ KTM 990 ಡ್ಯೂಕ್‌ನ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ವಿನ್ಯಾಸ. 990 ಡ್ಯೂಕ್ ವಿಶಿಷ್ಟವಾದ ಹೆಡ್‌ಲೈಟ್ ವಿನ್ಯಾಸವನ್ನು ಹೊಂದಿದೆ. ಹೆಡ್‌ಲೈಟ್‌ಗಳಲ್ಲಿ ನಾಲ್ಕು ಡಿಆರ್‌ಎಲ್‌ಗಳಿವೆ. ನಾಲ್ಕು DRL ಗಳ ನಡುವೆ ಟೊಳ್ಳಾದ ವಿನ್ಯಾಸವಿದೆ. ದೊಡ್ಡದಾದ ಕೋನೀಯ ಟ್ಯಾಂಕ್ ಶೌಡರ್‌ಗಳನ್ನು ಹೊಂದಿದೆ.

KTM 990 ಡ್ಯೂಕ್ ಎಂಜಿನ್

ಈ ಬೈಕ್‌ನ ಎಂಜಿನ್ ಕೂಡ ಗ್ರಾಹಕರ ಗಮನ ಸೆಳೆಯುತ್ತದೆ. ಬೈಕ್ 947cc ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದ್ದು, 123bhp ಮತ್ತು 103Nm ಟಾರ್ಕ್ ನೀಡುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ 990 ಡ್ಯೂಕ್ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ವೀಲ್‌ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಸ್ವಿಚ್ ಮಾಡಬಹುದಾದ ಎಬಿಎಸ್, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್. ಹೊಸ 390 ಡ್ಯೂಕ್‌ನಂತೆಯೇ ಎಡ ಸ್ವಿಚ್‌ ಗಿಯರ್‌ನಿಂದ ಎಲ್ಲಾ ಹೆಲ್ಪ್‌ಗಳನ್ನು ಪ್ರವೇಶಿಸಬಹುದು.

ಹೊಸ 990 ಡ್ಯೂಕ್ನಲ್ಲಿ WP-ನಿರ್ಮಿತ ಅಡ್ಜಸ್ಟೆಬಲ್‌ USD ಫೋರ್ಕ್‌ಗಳು ಗಮನಸೆಳೆಯುತ್ತವೆ. ಅದೇ ರೀತಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಅಡ್ಜಸ್ಟ್‌ ಮಾಡಬಹುದಾದ ಮೊನೊಶಾಕ್, 17-ಇಂಚಿನ ಚಕ್ರಗಳು, ಬ್ರಿಡ್ಜ್‌ಸ್ಟೋನ್ S22 ಟೈರ್‌ಗಳು, ನಾಲ್ಕು-ಪಿಸ್ಟನ್ ಫ್ರಂಟ್ ಬ್ರೇಕ್ ಕಾಲರ್‌ಗಳು, LED ಲೈಟಿಂಗ್, ಹಿಂಭಾಗದ ಬ್ಲಿಂಕರ್‌ಗಳಲ್ಲಿ ಇಂಟಿಗ್ರೇಟೆಡ್ ಟೈಲ್‌ಲ್ಯಾಂಪ್‌ಗಳು ಮತ್ತು 5-ಇಂಚಿನ TFT ಡ್ಯಾಶ್‌ಬೋರ್ಡ್ ಅನ್ನು ಅಳವಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read