ಸಂಕ್ರಾಂತಿ ಹೊತ್ತಲ್ಲೇ ಶುಭ ಸುದ್ದಿ: ರಜೆ ದಿನ ಕೆಲಸ ಮಾಡುವ ನೌಕರರಿಗೆ ಹೆಚ್ಚುವರಿ ವೇತನ: KSRTC ಆದೇಶ

ಬೆಂಗಳೂರು: ಸಾರ್ವತ್ರಿಕ ರಜೆ ಮತ್ತು ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶಿಸಿದೆ.

ಈ ಮೂಲಕ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ ನೀಡಿದೆ. ಜನವರಿಯಿಂದ ಜೂನ್ ವರೆಗೆ ಹಬ್ಬಗಳು, ಪ್ರವಾಸ, ಮದುವೆ ಮೊದಲಾದ ಕಾರ್ಯಕ್ರಮಗಳು ಹೆಚ್ಚಾಗಿರುತ್ತವೆ. ಕೆಎಸ್ಆರ್ಟಿಸಿ ವಾಹನಗಳ ಕಾರ್ಯಾಚರಣೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಹಬ್ಬದ ರಜಾ ದಿನಗಳು, ಸಾರ್ವತ್ರಿಕ ರಜೆ ದಿನಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನ ನೀಡುವುದಾಗಿ ಕೆಎಸ್ಆರ್ಟಿಸಿ ಆದೇಶಿಸಿದೆ.

2023ರ ಜನವರಿ 23ರಿಂದ ಜೂನ್ 23ರ ವರೆಗೆ ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಿಗೆ ಮತ್ತು ಸಾರ್ವತ್ರಿಕ ರಜಾ ದಿನಗಳಿಗೆ ಹೆಚ್ಚುವರಿ ವೇತನ ಸೀಮಿತಗೊಳಿಸಲಾಗಿದ್ದು, ಈ ಅವಧಿಯಲ್ಲಿ ನೌಕರರು ಕರ್ತವ್ಯ ನಿರ್ವಹಿಸಿದ್ದಲ್ಲಿ ಹೆಚ್ಚುವರಿ ವೇತನ ಪಾವತಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read