BIG NEWS: KSRTC ಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ಸುರಿಮಳೆ

ಸಾರಿಗೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ 16 ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ.

ಪಲ್ಲಕ್ಕಿ ಬ್ರ್ಯಾಂಡಿಂಗ್‌ಗಾಗಿ ಅತ್ಯುತ್ತಮ ‘ಪ್ರಾಡಕ್ಟ್‌ ಪ್ಲೇಸ್‌ಮೆಂಟ್‌’ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ ಪ್ರಶಸ್ತಿ, ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಪ್ರಶಸ್ತಿ, ಪಲ್ಲಕ್ಕಿ ಬ್ರ್ಯಾಂಡಿಂಗ್‌ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ಪ್ರಶಸ್ತಿ, ಅಂಬಾರಿ ಉತ್ಸವದ ಬ್ರ್ಯಾಂಡಿಂಗ್‌ಗೆ ಇನ್‌ಸ್ಟಾಗ್ರಾಂ ಕ್ಯಾಂಪೇನ್‌ ವಿಭಾಗದ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ಗೆ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ ಪ್ರಶಸ್ತಿ, ಕೆಎಸ್‌ಆರ್‌ಟಿಸಿಗೆ ಶ್ರೇಷ್ಠ ವಿಡಿಯಾ ಕಂಟೆಂಟ್ ಬ್ರ್ಯಾಂಡ್‌ ಎಂಟರ್ಪ್ರೈಸ್‌ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಶ್ರೇಷ್ಠ ಪಿಆರ್ ಕ್ಯಾಂಪೇನ್, ಕಡಿಮೆ ಬಜೆಟ್ ಮಾರ್ಕೆಟಿಂಗ್ ಆಫ್‌ಲೈನ್‌ ಕ್ಯಾಂಪೇನ್, ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್, ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರ್ಯಾಂಡ್‌ ಕಂಟೆಂಟ್ ಹಾಗೂ ಬ್ರ್ಯಾಂಡಿಂಗ್‌ ಶ್ರೇಷ್ಠ ಆನ್‌ಲೈನ್‌ ಪಿಆರ್ ಕ್ಯಾಂಪೇನ್ ಪ್ರಶಸ್ತಿ ನೀಡಲಾಗಿದೆ.

ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ ಎರಡು ಸ್ಕ್ಯಾಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿ ಮತ್ತು ಒಂದು ಸ್ಕ್ಯಾಚ್‌ ಪ್ರಶಸ್ತಿಗೆ ಆಯ್ಕೆಯಾಗಿದೆ.

‘ಮೆಟ್ರೊ ಫೀಡರ್‌ ಕ್ಯೂಆರ್ ಸ್ಕ್ಯಾನರ್’  ನಾಮನಿರ್ದೇಶನಕ್ಕಾಗಿ ಬಿಎಂಟಿಸಿಯನ್ನು ರಾಷ್ಟ್ರೀಯ ಸ್ಕಾಚ್ ಸಂಸ್ಥೆ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್‌ 21ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read