ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ ಭಾರಿ ಏರಿಕೆ ಮಾಡಿದ ಖಾಸಗಿ ಬಸ್ ಮಾಲೀಕರು

ಬೆಂಗಳೂರು: ವಾರಾಂತ್ಯ ರಜೆ, ದೀಪಾವಳಿ ರಜೆ ಇರುವುದರಿಂದ ಊರು, ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರವನ್ನು ಭಾರಿ ಹೆಚ್ಚಳ ಮಾಡಲಾಗಿದೆ.

ನವೆಂಬರ್ 11 ರಿಂದ 14ರವರೆಗೆ ಎರಡನೇ ಶನಿವಾರ, ಭಾನುವಾರ, ದೀಪಾವಳಿ ರಜೆ ಇದೆ. ಸಾಲು ಸಾಲು ರಜೆ ಇರುವುದರಿಂದ ಖಾಸಗಿ ಬಸ್ ಮಾಲೀಕರು ಸಂದರ್ಭ ದುರ್ಬಳಕೆ ಮಾಡಿಕೊಂಡು ಬಸ್ ಟಿಕೆಟ್ ದರವನ್ನು ಎರಡು ಮೂರು ಪಟ್ಟು ಏರಿಕೆ ಮಾಡಿದ್ದಾರೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ 600 ರೂ. ನಿಂದ 2,100 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ 700 ರೂ.ನಿಂದ 2,000 ರೂ. ವರೆಗೆ. ಉಡುಪಿಗೆ 700 ರೂ.ನಿಂದ 2 100 ರೂ. ವರೆಗೆ, ಕಲಬುರಗಿಗೆ 2199 ರೂ.ನಿಂದ 3 ಸಾವಿರ ರೂ. ವರೆಗೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಹುಬ್ಬಳ್ಳಿಗೆ 1,299 ರೂ.ನಿಂದ 4000 ರೂ.ವರೆಗೆ ಹೆಚ್ಚಳ ಮಾಡಿದ್ದು, ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ.

ದೀಪಾವಳಿ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ವತಿಯಿಂದ ನವೆಂಬರ್ 10 ರಿಂದ 2000 ಬಸ್ ಗಳನ್ನು ಬಿಡಲಾಗಿದೆ. ಈಗಾಗಲೇ ಎಲ್ಲಾ ಸೀಟುಗಳನ್ನು ಕಾಯ್ದಿರಿಸಿದ್ದು, ಬಸ್ ಗಳು ಭರ್ತಿಯಾಗಿವೆ. ಕೆಎಸ್ಆರ್ಟಿಸಿ ವಿಶೇಷ ಬಸ್ ಗಳನ್ನು ಬಿಟ್ಟಿರುವುದರಿಂದ ಖಾಸಗಿ ಬಸ್ ಗಳ ದುಬಾರಿ ಪ್ರಯಾಣ ದರದ ಬಿಸಿಯಿಂದದ ಪ್ರಯಾಣಿಕರು ಪಾರಾಗಿದ್ದಾರೆ.

ಬೆಂಗಳೂರಿನಿಂದ ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಬಳ್ಳಾರಿ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಹೆಚ್ಚುವರಿ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read