ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸ್ಥಗಿತಗೊಂಡಿದ್ದ 3800 ರೂಟ್ ಪುನಾರಂಭ

ಬೆಂಗಳೂರು: ಕೊರೋನಾ ಸಂದರ್ಭದಲ್ಲಿ ರಾಜ್ಯಾದ್ಯಂತ 3800 ಸರ್ಕಾರಿ ಬಸ್ ರೂಟ್ ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇವುಗಳನ್ನು ಶೀಘ್ರವೇ ಪುನಾರಂಭಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಬಹುತೇಕ ಕಡೆಗಳಲ್ಲಿ ರೂಟ್ ಬಸ್ ಗಳ ಓಡಾಟ ಆರಂಭವಾಗದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಸಾರಿಗೆ ಇಲಾಖೆ ಸ್ಥಗಿತಗೊಳಿಸಿದ ಬಸ್ ರೂಟ್ ಗಳ ಪೂನಾರಂಭಕ್ಕೆ ಚಿಂತನೆ ನಡೆಸಿದೆ.

ಕೋವಿಡ್ ವೇಳೆ ಸ್ಥಗಿತಗೊಳಿಸಿದ್ದ ಬಸ್ ಸೇವೆ ಪುನಾರಂಭವಾಗಲಿದೆ, ವಿವಿಧ ಜಿಲ್ಲೆಗಳ 3800 ಬಸ್ ರೂಟ್ ಗಳನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ಇದ್ದು, ಬಸ್ ಖರೀದಿಗೆ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರೊಂದಿಗೆ 10 ಸಾವಿರ  ಹೆಚ್ಚುವರಿ ಟ್ರಿಪ್ ಓಡಿಸುವ ಮೂಲಕ ಸ್ಥಗಿತಗೊಂಡಿದ್ದ ಬಸ್ ರೂಟ್ ಗಳ ಆರಂಭಕ್ಕೆ ತಮ್ಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

5800 ಹೊಸ ಬಸ್ ಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದ್ದು, ಒಂದು ವರ್ಷದಲ್ಲಿ 2236 ಹೊಸ ಬಸ್ ಬಂದಿವೆ. 970 ಬಸ್ ಗಳನ್ನು ನವೀಕರಿಸಲಾಗಿದೆ. 250 ತಾಂತ್ರಿಕ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಸಮರ್ಪಕ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read