ಧಾರವಾಡ : ಧಾರವಾಡ ತಾಲೂಕ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷ ಅರವಿಂದ ಏಗನಗೌಡರ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಸಮಿತಿ ಸಭೆ ಜರುಗಿತ್ತು.ಅರವಿಂದ ಏಗನಗೌಡರ ಅವರು ಮಾತನಾಡಿ, ಬಸ್ ಚಾಲಕರು ಹಾಗೂ ನಿರ್ವಾಹಕರು, ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಅವರ ಕೋರಿಕೆಯಂತೆ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಬೇಕು. ನಿರ್ವಾಹಕರ ವಿರುದ್ಧ ದೂರುಗಳು ಬಂದಲ್ಲಿ ಗಂಭೀರವಾಗಿ ಪರಿಗಣಿಸುವಂತೆ ಅವರು ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಶಕ್ತಿ ಯೋಜನೆ: ಶಕ್ತಿ ಯೋಜನೆಯಡಿಯಲ್ಲಿ ಒಟ್ಟು ಮಹಿಳಾ ಪ್ರಯಾಣಿಕರು ಜೂಲೈ-2025 ನೇ ತಿಂಗಳಲ್ಲಿ ಒಟ್ಟು 5,83,564 ರಷ್ಟು ಪ್ರಯಾಣಿಸಿರುತ್ತಾರೆ. ಸದರಿ ಮಹಿಳಾ ಪ್ರಯಾಣಿಕರಿಂದ ರೂ, 1,78,63,895/-ಗಳಷ್ಟು ಆದಾಯವಾಗಿರುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಗ್ರಾಮೀಣ) ಘಟಕ ವ್ಯವಸ್ಥಾಪಕರು ತಿಳಿಸಿದರು.
ಶಕ್ತಿ ಯೋಜನೆಯಡಿಯಲ್ಲಿ ಒಟ್ಟು ಮಹಿಳಾ ಪ್ರಯಾಣಿಕರು ಜುಲೈ-2025ನೇ ತಿಂಗಳಲ್ಲಿ ಒಟ್ಟು 36,59,028 ರಷ್ಟು ಪ್ರಯಾಣಿಸಿರುತ್ತಾರೆ. ಸದರಿ ಮಹಿಳಾ ಪ್ರಯಾಣಿಕರಿಂದ ರೂ, 5,25,20,337/- ಗಳಷ್ಟು ಆದಾಯವಾಗಿರುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಶಹರ) ಘಟಕ ವ್ಯವಸ್ಥಾಪಕರು ವರದಿ ಸಲ್ಲಿಸಿದರು.
ಗೃಹ ಲಕ್ಷ್ಮೀ ಯೋಜನೆ: ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧಾರವಾಡ (ಗ್ರಾಮೀಣ) -71 ಭಾಗದಲ್ಲಿ ಇಂಧೀಕರಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ: 53543, ಯೋಜನೆಗೆ ಒಳಪಟ್ಟ ಫಲಾನುಭವಿಗಳ ಸಂಖ್ಯೆ: 53411 ಇದ್ದು, ಈ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಅದರಂತೆ ಸದರಿ ಫಲಾನುಭವಿಗಳಿಗೆ ಇಲ್ಲಿಯವರೆಗೆ 2,13,64,40,000 ಗಳಷ್ಟು ಹಣ ಸಂದಾಯವಾಗಿರುತ್ತದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧಾರವಾಡ (ಶಹರ) – 71 ಭಾಗದಲ್ಲಿ ಇಂಧೀಕರಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ: 40459, ಒಟ್ಟು ಗೃಹ ಲಕ್ಷ್ಮೀ ಯೋಜನೆಗೆ ನೊಂದಣಿಯಾದ ಫಲಾನುಭವಿಗಳ ಸಂಖ್ಯೆ: 40,121 ಅದರಂತೆ ಸದರಿ ಫಲಾನುಭವಿಗಳಿಗೆ ಇಲ್ಲಿಯವರೆಗೆ 160,39,60,000 ಗಳಷ್ಟು ಹಣ ಸಂದಾಯವಾಗಿರುತ್ತದೆ.
ಅನ್ನಭಾಗ್ಯ ಯೋಜನೆ: ಧಾರವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಟ್ಟು ಪಡಿತರ ಚೀಟಿಗಳ ಸಂಖ್ಯೆ: 53018 ಇದ್ದು, ಒಟ್ಟು 70 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಪೆಬ್ರುವರಿ-2025 ರಿಂದ ಡಿ.ಬಿ.ಟಿ ಮುಖಾಂತರ ಹಣ ಸಂದಾಯ ಮಾಡುವುದನ್ನು ಸ್ಥಗೀತಗೊಳಿಸಿ ಸರ್ಕಾರದ ಆದೇಶದ ಪ್ರಕಾರ 05 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ ಹಾಗೂ ಈ ತಿಂಗಳ ಹೊಸ ಪಡಿತರ ಚೀಟಿಗೆ ಅರ್ಜಿಗಳು ಸಂಖ್ಯೆ: 1430 ಇದ್ದು ಪರಿಶೀಲನಾ ಹಂತದಲ್ಲಿ ಬಾಕಿ ಇರುತ್ತದೆ ಹಾಗೂ ಅತೀ ಹೆಚ್ಚು ಜನ ದಟ್ಟನೆಯ ಪ್ರದೇಶದಲ್ಲಿ ಹೆಚ್ಚುವರಿ ರೇಷನ ಅಂಗಡಿಗಳನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡ (ಶಹರ) ದಲ್ಲಿ ಜುಲೈ 2025 ಮಾಹೆಯಲ್ಲಿ ಪ್ರತಿ ಎಎವಾಯ್ ಕಾರ್ಡಗೆ ಎನ್ಎಫ್ಎಸ್ಎ ಗೆ 14 ಕೆಜಿ ಅಕ್ಕಿ 21 ಕೆಜಿ ಜೋಳವನ್ನು ವಿತರಣೆ ಮಾಡಲಾಗುತ್ತಿದೆ.ಜುಲೈ 2025 ಮಾಹೆಯಲ್ಲಿ ಪಿಎಚ್ಎಚ್ ಕಾರ್ಡ ಪ್ರತಿ ಸದಸ್ಯರಿಗೆ ಎನ್ಎಫ್ಎಸ್ಎ 02 ಕೆಜಿ ಅಕ್ಕಿ ಮತ್ತು 03 ಕೆಜಿ ಜೋಳ ಹಾಗೂ ಅನ್ನಭಾಗ್ಯ 05 ಕೆಜಿ ಅಕ್ಕಿಯಂತೆ ಕೇಂದ್ರ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 07 ಕೆಜಿ ಅಕ್ಕಿ 03 ಕೆ ಜಿ ಜೋಳವನ್ನು ಹಾಗೂ ರಾಜ್ಯ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ: ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಶಹರದ ವ್ಯಾಪ್ತಿಯಲ್ಲಿ ಒಟ್ಟು ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ: 32065 ಅಂತಾ ಇದ್ದು ಜೂನ್ -2025ರ ಅಂತ್ಯಕ್ಕೆ ರೂ,151.6 ಲಕ್ಷಗಳಷ್ಟು ಖರ್ಚಾಗಿರುತ್ತದೆ.ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ ಒಟ್ಟು ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ: 54965 ಅಂತಾ ಇದ್ದು, ಮೇ 31, 2025 ರಿಂದ ಇಲ್ಲಿಯವರೆಗೆ 93.40 ಲಕ್ಷಗಳಷ್ಟು ಖರ್ಚಾಗಿರುತ್ತದೆ.
ಯುವನಿಧಿ ಯೋಜನೆ: ಯುವ ನಿಧಿ ಯೋಜನೆಯಡಿಯಲ್ಲಿ ಒಟ್ಟು ನೋಂದಣಿಯಾದ ಸಂಖ್ಯೆ: 2688 ಅದರಲ್ಲಿ ಧಾರವಾಡ ತಾಲೂಕಿನ ಒಟ್ಟು ಫಲಾನುಭವಿಗಳ ಸಂಖ್ಯೆ: 2284 ಬಾಕಿ 404, ಪದವಿ ವಿದ್ಯಾರ್ಥಿಗಳಿಗೆ ಸಂದಾಯವಾದ ವೆಚ್ಚ ರೂ, 4,12,23,000, ಡಿಪೆÇ್ಲೀಮಾ ವಿದ್ಯಾರ್ಥಿಗಳ ಸಂಖ್ಯೆ: 3,18,000 ಸದರಿ ವಿದ್ಯಾರ್ಥಿಗಳಿಗೆ ಮೊತ್ತ ರೂ, 4,15,41,000 ನೀಡಲಾಗಿದೆ.