ರಾಜ್ಯದ ರೈತರಿಗೆ ಸಿಹಿ ಸುದ್ದಿ: ಭೂ ಮಂಜೂರಾತಿ ಪಡೆದವರಿಗೆ ‘ನನ್ನ ಭೂಮಿ’ ಖಾತರಿ

ಬೆಂಗಳೂರು: ಭೂ ಮಂಜೂರಾತಿ ಪಡೆದ ರೈತರರಿಗೆ ‘ನನ್ನ ಭೂಮಿ’ ಖಾತರಿಯಡಿ ಪಕ್ಕಾ ದಾಖಲೆ ಪೋಡಿ ದುರಸ್ತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸರ್ಕಾರದಿಂದ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ, ಪೋಡಿ ದುರಸ್ತಿಯಾಗದೇ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಈಗ ಕಂದಾಯ ಇಲಾಖೆ ಅಧಿಕಾರಿಗಳೇ ಗ್ರಾಮಕ್ಕೆ ಹೋಗಿ ಸರ್ವೆ ನಡೆಸಿ ನಕ್ಷೆ, ಹೊಸ ಸರ್ವೆ ನಂಬರ್‌ ನೀಡಿ ಹೊಸ ಆರ್‌ಟಿಸಿ ಹಸ್ತಾಂತರಿಸುವ ಮೂಲಕ ʼನನ್ನ ಭೂಮಿʼ ಎಂಬ ಖಾತರಿ ನೀಡುತ್ತಿದ್ದಾರೆ.

ಏಪ್ರಿಲ್‌ ಅಂತ್ಯಕ್ಕೆ 20,000 ಕುಟುಂಬಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಇದೆ. ಆರು ತಿಂಗಳ ಕಾಲ ಅಭಿಯಾನ ಯಶಸ್ವಿಯಾಗಿ ನಡೆದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆರು ತಿಂಗಳಲ್ಲಿ ಎಲ್ಲಾ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು. 15 ದಿನಗಳಿಗೊಮ್ಮೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು. ತಮ್ಮ ಪಾಲಿನ ಜಮೀನು ಇದ್ದರೂ ಫೋಡಿಯಾಗದೆ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ದಾಖಲೆಯನ್ನು ಸಿದ್ಧಪಡಿಸಿ ಮುಂದಿನ ಹಂತದ ನಮೂನೆಗೆ ಭೂಮಾನ ಇಲಾಖೆಗೆ ಕಡತ ಕಳಿಸಬೇಕು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read