ಉದ್ಯೋಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ : 400 ಪಶುವೈದ್ಯಧಿಕಾರಿ ಸೇರಿ 2,000 ಹುದ್ದೆಗಳ ಭರ್ತಿಗೆ `KPSC’ ಸಿದ್ಧತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಉದ್ಯೊಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊಸ ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸಲು ಸಜ್ಜಾಗಿದೆ.

ಕೆಪಿಎಸ್ ಸಿ ಎಲ್ಲಾ ಇಲಾಖೆಗಳಿಗೆ ಖಾಲಿ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಪ್ರಸ್ತಾವ ಕಳುವಹಿಸುವಂತೆ ಕೋರಿತ್ತು.  ಅದರಂತೆ 25 ಕ್ಕೂ ಅಧಿಕ ಇಲಾಖೆಯ ಎ,ಬಿ ಮತ್ತು ಸಿ ವೃಂದದ ಹುದ್ದೆಗಳ ಭರ್ತಿಗೆ ಈಗಾಗಲೆ ಪ್ರಸ್ತಾವ ಸಲ್ಲಿಸಿದೆ. ಇನ್ನು ಕೆಲವು ಇಲಾಖೆಗಳಲ್ಲಿ ಸಲ್ಲಿಸಬೇಕಿದೆ. ಆ ಪ್ರಸ್ತಾವಗಳನ್ನು ಆಯೋಗ ಪರಿಶೀಲನೆ ನಡೆಸುತ್ತಿದ್ದು, ಅದಾದ ಬಳಿಕ ಸರ್ಕಾರದ ಅನುಮೋದನೆ ಪಡೆದು ನೇಮಕ ಪ್ರಕ್ರಿಯೆ ನಡೆಸಲು ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.

ಪಶುವೈದ್ಯಾಧಿಕಾರಿಗಳು 400 ಹುದ್ದೆ, ಕೃಷಿ ಸಹಾಯಕ ಅಧಿಕಾರಿಗಳ 300 ಹುದ್ದೆ, ಶಿಕ್ಷಣ ಇಲಾಖೆಯಲ್ಲಿ 140 ಮುಖ್ಯ ಶಿಕ್ಷಕರ ಹುದ್ದೆ, ಜಲ ಸಂಪನ್ಮೂಲ ಇಲಾಖೆಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಬಿಬಿಎಂಪಿಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಸಾರಿಗೆ ಇಲಾಖೆಯಲ್ಲಿ 76 ಮೋಟಾರ್ ವಾಹನ ನಿರೀಕ್ಷಕರ ಹುದ್ದೆ, ಜಲಸಂಪನ್ಮೂಲ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಗಳ 300 ಹುದ್ದೆ, ಗೆಜೆಟೆಡ್ ಪ್ರೊಬೇಷನರಿ 40 ಹುದ್ದೆಗಳು, ವಿವಿಧ ಇಲಾಖೆಗಳಲ್ಲಿ ಎಪ್.ಡಿ.ಎ., ಎಸ್ಡಿಎ, ಶೀಘ್ರ  ಲಿಪಿಕಾರ ಸುಮಾರು 2000 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪ್ರಸ್ತಾವನೆಗಳ ವಿವರಗಳನ್ನು ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಹಾಗೆಯೇ ಜಲಸಂಪನ್ಮೂಲ ಇಲಾಖೆಯಲ್ಲಿನ 300 ಕಿರಿಯ ಇಂಜಿನಿಯರ್, 43 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು, ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವಂತ 140 ಮುಖ್ಯೋಪಾಧ್ಯಾಯರು, ಜಲ  ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವಂತ 100 ಸಹಾಯ ಇಂಜಿನಿಯರ್, ಬಿಬಿಎಂಪಿಯಲ್ಲಿನ 100 ಸಹಾಯಕ ಇಂಜಿನಿಯರ್, ಸಾರಿಗೆ ಇಲಾಖೆಯಲ್ಲಿನ 76 ಮೋಟಾರು ವಾಹನ ನಿರೀಕ್ಷಕರ ಹುದ್ದೆ, ಸೇರಿದಂತೆ ಎಫ್ ಡಿಎ, ಎಸ್ ಡಿಎ ಹುದ್ದೆ ಸೇರಿ 2000 ಹುದ್ದೆಗಳ ಭರ್ತಿಗೆ ಪ್ರಸ್ತಾವನೆಗಳು ಬಂದಿರುವುದಾಗಿ ಮಾಹಿತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read