ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು ಇಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತಾರೆ. ಅವರು ಆಗಾಗ್ಗೆ ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ವಿಡಿಯೋಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ, ಭಾರತೀಯ ಪಾಕಪದ್ಧತಿಗಳನ್ನು ಆನಂದಿಸುತ್ತಾರೆ.

ಈಗ ಅವರು ಕಳೆದ ವಾರ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಹೆತ್ತವರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜಿವಾನ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಜಿವಾನ್ ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿ ತಮ್ಮ ಹೆತ್ತವರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಅವರ ಹಿನ್ನೆಲೆಯಲ್ಲಿ ತಾಜ್ ಮಹಲ್ ನೋಡಬಹುದು. ಇಂದು ನಾನು ತಾಜ್ ಮಹಲ್ ಅನ್ನು ನನ್ನ ಪೋಷಕರಿಗೆ ತೋರಿಸಿದೆ ಮತ್ತು ಅವರು ತಾಜ್ ಮಹಲ್ ಅನ್ನು ಪ್ರೀತಿಸುತ್ತಾರೆ. ಅವರಿಗೆ ಇನ್‌ಕ್ರೆಡಿಬಲ್ ಇಂಡಿಯಾವನ್ನು ತೋರಿಸಲು ನನಗೆ ಸಂತೋಷವಾಗಿದೆ. ನಾನು ಸಂಪೂರ್ಣವಾಗಿ ಭಾರತೀಯಳು. ಭಾರತವನ್ನು ಚೆನ್ನಾಗಿ ಪ್ರೀತಿಸುತ್ತೇನೆ ಎಂದಿದ್ದಾರೆ. ಇವರ ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read