ಕೊಪ್ಪಳ: ಮೀನು ಹಿಡಿಯಲೆಂದು ಹೋಗಿದ್ದ ಇಬ್ಬರು ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಇಬ್ಬರೂ ನೀರುಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದಿದೆ.
ಫಕೀರಸಾಬ್ (36) ಶರಣಪ್ಪ ಎಮ್ಮೇರ್ (32) ನೀರುಪಾಲಾದ ವ್ಯಕ್ತಿಗಳು. ಮೀನು ಹಿಡಿಯಲೆಂದು ಕೆರೆಗೆ ಹೋಗಿದ್ದರು. ಗಾಳಿಯ ರಭಸಕ್ಕೆ ತೆಪ್ಪ ಮಗುಚಿ ಬಿದ್ದಿದೆ. ಇಬ್ಬರೂ ನೀರುಪಾಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಯಲಬುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.
