ಕಾಂಗ್ರೆಸ್ ಮುಖಂಡನ ಗ್ಯಾಂಗ್ ನಿಂದ 3.5 ಕೆಜಿ ಚಿನ್ನ ಕಳುವು ಪ್ರಕರಣ: ಐವರು ಆರೋಪಿಗಳು ಅರೆಸ್ಟ್; ಓರ್ವ ಆರೋಪಿ ಆತ್ಮಹತ್ಯೆ

ಕೋಲಾರ: ಕಾಂಗ್ರೆಸ್ ಮುಖಂಡನ ಗ್ಯಾಂಗ್ ನಿಂದ 3.5ಕೆಜಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಬಂಧಿಸಿದಂತೆ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಂಧಿತರನ್ನು ತಮಿಳುನಾಡು ಮೂಲದ ಪಿ.ವೇದಾವಲಂ, ಕುಮಾರನ್, ರಂಜಿತ್, ಶಂಕರ್, ದೇಬೇಶ್ ಚಕ್ರವರ್ತಿ ಹಾಗೂ ವೇಲು ಎಂದು ಗುರುತಿಸಲಾಗಿದೆ. ಪ್ರಕರಣದ ಎಂಟನೇ ಆರೋಪಿ ಅಪ್ಪು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮಿಳುನಾದಿನ ಕಂಬಟ್ಟುಬಳಿ ಮರಕ್ಕೆ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಏಪ್ರಿಲ್ 2 ರಂದು ರಾತ್ರಿ ಕೋಲಾರ ಜಿಲ್ಲೆಯ ಕೆಜಿಎಫ್​ನ ಕಾಂಗ್ರೆಸ್ ಮುಖಂಡ ಹಾಗೂ ಹಾಲಿ ನಗರಸಭೆ ಸದಸ್ಯ ಸೇರಿದಂತೆ ದರೋಡೆಕೋರರು ತಮಿಳುನಾಡಿನಿಂದ ಬರುತ್ತಿದ್ದ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 3.5 ಕೆಜಿ ಚಿನ್ನ ದೋಚಿದ್ದರು. ಚೆನೈ ನಿಂದ ಕೆಜಿಎಫ್​ಗೆ ಬರುತ್ತಿದ್ದ ಚಿನ್ನದ ವ್ಯಾಪಾರಿ ಚೇತನ್ ಜೈನ್ ಎಂಬುವವರ ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನ ದರೋಡೆ ಮಾಡಿ ಗ್ಯಾಂಗ್ ಪರಾರಿಯಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read