ಕೋಲಾರ: ಶಬರಿಮಲೆಗೆ ತೆರಳಿದ್ದ ಕೋಲಾರದ ಅಯ್ಯಪ್ಪ ಮಾಲಾಧಾರಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಅಮರೇಶ್ ನಾಪತ್ತೆಯಾದ ಮಾಲಾಧಾರಿ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನೂಟುವೆ ಗ್ರಾಮದ ಅಮರೇಶ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ಹೋಗಿದ್ದರು. ಈ ವೇಳೆ ನಾಪತ್ತೆಯಾಗಿದ್ದಾರೆ.
ಅಮರೇಶ್ ಅವರಿಗೆ ಮಾತು ಬರುವುದಿಲ್ಲ, ಮೂಕರು. ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರವೇಶ ದ್ವಾರದಲ್ಲೊ ಪ್ರವೇಶ ಪಡೆದ ಬಳಿಕ ನಾಪತ್ತೆಯಾಗಿದ್ದಾರೆ. ಯಾರಾದರೂ ಅಮರೇಶ್ ಅವರನ್ನು ಕಂಡರೆ ಮಾಹಿತಿ ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
