ಚಿಂತೆ ಬೇಡ ಯಾವುದೇ ತೆರಿಗೆ ಅಧಿಕಾರಿ ಬರಲ್ಲ: UPSC ಆಕಾಂಕ್ಷಿಗೆ ಪ್ರಧಾನಿ ಹಾಸ್ಯ ಚಟಾಕಿ ವಿಡಿಯೋ ವೈರಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯುಪಿಎಸ್‌ಸಿ ಆಕಾಂಕ್ಷಿಯೊಂದಿಗೆ ತಮಾಷೆಯಿಂದ ಸಂಭಾಷಣೆ ನಡೆಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಲ್ಯಾಣ ಯೋಜನೆಗಳ ವ್ಯಾಪ್ತಿ, ಪ್ರಯೋಜನ ಖಚಿತಪಡಿಸಿಕೊಳ್ಳಲು ಸರ್ಕಾರದ ಉಪಕ್ರಮವಾದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮಾತನಾಡುತ್ತಿದ್ದರು.

ಅಲ್ಲಿದ್ದ ಯುವಕನಿಗೆ ಏನು ಮಾಡುತ್ತೀರಿ? ಎಷ್ಟು ಓದಿದ್ದೀರಿ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ

ಯುವಕ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿ, ನಾನು UPSC ಪರೀಕ್ಷೆಯ ಆಕಾಂಕ್ಷಿ. ಅಂಗಡಿಯನ್ನೂ ನಡೆಸುತ್ತಿದ್ದು, ವಾಣಿಜ್ಯ ಪದವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಆಗ ಪ್ರಧಾನಿ ಮೋದಿ, ಅಂಗಡಿಯಿಂದ ಎಷ್ಟು ಸಂಪಾದಿಸುತ್ತೀರಿ. ಸರ್ಕಾರದ ಕಲ್ಯಾಣ ಯೋಜನೆಗಳಿಂದ ನೀವು ಹೇಗೆ ಪ್ರಯೋಜನ ಪಡೆದಿದ್ದೀರಿ ಎಂದು ಕೇಳಿದ್ದಾರೆ.

ಆಗ ಯುವಕ ತನ್ನ ಅಂಗಡಿಯನ್ನು ನಡೆಸಲು ಸಹಾಯ ಮಾಡಿದ ಯೋಜನೆಗಳ ಬಗ್ಗೆ ತಿಳಿಸಿ ಅವನು ಪಡೆದ ಎಲ್ಲಾ ಪ್ರಯೋಜನಗಳ ಪಟ್ಟಿ ಮಾಡಿ ತಿಳಿಸಿದ್ದಾರೆ.

ಪ್ರಧಾನಿಯವರು ನಿಮ್ಮ ಅಂಗಡಿಗೆ ಎಷ್ಟು ಜನರು ಬರುತ್ತಾರೆ ಎಂದು ಕೇಳಿದ್ದಾರೆ. ಯುವಕ ನಾನು ಲೆಕ್ಕ ಹಾಕಿಲ್ಲ. ಪ್ರತಿದಿನ 10-12 ಜನರು ಬರುತ್ತಾರೆ ಎಂದಿದ್ದಾರೆ.

ನಂತರ ಪ್ರಧಾನಮಂತ್ರಿಯು ಅವರಿಗೆ ಪ್ರಮುಖ ಪ್ರಶ್ನೆಯನ್ನು ಕೇಳುತ್ತಾರೆ? “ನೀವು ತಿಂಗಳಿಗೆ ಎಷ್ಟು ಸಂಪಾದಿಸುತ್ತೀರಿ? ಎಂದಾಗ ಯುವಕ ಲೆಕ್ಕ ಹಾಕಿಲ್ಲ ಎನ್ನುತ್ತಾರೆ. ಪ್ರಧಾನಿ ನಗುತ್ತಾ, ಅಚ್ಚಾ ಮತ್ತ್ ಬತೈಯೆ, ಕೋಯಿ ಆದಾಯ ತೆರಿಗೆ ವಾಲಾ ನೆಹಿ ಆಯೇಗಾ ಭಾಯ್(ಸರಿ ನನಗೆ ಹೇಳಬೇಡಿ, ಚಿಂತಿಸಬೇಡಿ, ಯಾವುದೇ ಆದಾಯ ತೆರಿಗೆ ಅಧಿಕಾರಿ ಬರುವುದಿಲ್ಲ.)” ಎಂದು ತಮಾಷೆ ಮಾಡುತ್ತಾರೆ.

ಮೋದಿ ಆದಾಯ ತೆರಿಗೆ ಅಧಿಕಾರಿಗಳನ್ನು ಕಳುಹಿಸುತ್ತಾರೆ ಎಂದು ನೀವು ಭಾವಿಸಬಹುದು. ಹಾಗೆಲ್ಲಾ ಬರಲ್ಲ ಎಂದು ಪ್ರಧಾನಿ ಹೇಳುತ್ತಾರೆ.

ಯುವಕನ ಉತ್ಸಾಹ ಅವರು ಸ್ವತಃ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳುತ್ತಾರೆ. ನಿಮ್ಮನ್ನು ಭೇಟಿಯಾಗಿರುವುದು ಸಂತೋಷವಾಗಿದೆ ಎಂದು ಯುವಕ ಪ್ರತಿಕ್ರಿಯಿಸುತ್ತಾನೆ. ಪ್ರಧಾನಿ ಮತ್ತು ಯುವಕ ನಗುವ ಮೂಲಕ ಸಂಭಾಷಣೆ ಕೊನೆಗೊಳ್ಳುತ್ತದೆ.

https://twitter.com/i/status/1736383735887499337

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read