ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಹಾಸನ: ಪ್ರಕೃತಿ ವಿಕೋಪ, ಗಂಡಾಂತರಗಳ ಬಗ್ಗೆ ಈ ಹಿಂದೆ ಭವಿಷ್ಯ ನುಡಿದ್ದ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದ ಶಿವಾನಂದ ಶಿವಯೋಯೋಗಿ ರಾಜೇಂದ್ರ ಶ್ರೀಗಳು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈ ಬಾರಿ ಆಕಾಶದಿಂದ ಆಪತ್ತು ಕಾದಿದೆ ಎಂದು ಹೇಳಿದ್ದಾರೆ. ಪಂಚ ಭೂತಗಳಿಂದಲೂ ದೇಶಕ್ಕೆ ತೊಂದರೆ ಇದೆ. ಆದರೆ ಆಗಸದಿಂದ ಅಪಾಯ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಕೋಡಿಮಠದಲ್ಲಿ ಮಾತನಾಡಿದ ಸ್ವಾಮೀಜಿ, ಈ ವರ್ಷ ಮಳೆಯಿಂದ ದೇಶದಲ್ಲಿ ತೊಂದರೆ ಸಂಭವಿಸಲಿದೆ ಎಂದು ಹೇಳಿದ್ದೆ. ಇನ್ನೂ ಕೂಡ ಮಳೆ ಮುಂದುವರೆಯಲಿದೆ. ನಮಗೆ ಪಂಚ ಶಕ್ತಿಗಳಿಂದಲೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲಾ ಕಡೆ ತೊಂದರೆಯಾಗುತ್ತದೆ. ಆಕಾಶದಿಂದ ಸಮಸ್ಯೆ ಎದುರಾಗಲಿದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ. ಇನ್ನು ಗುಡ್ಡ ಕುಸಿಯಲಿದೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಮಳೆ ಇನ್ನೂ ಇದೆ. ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾರೆ.

ಇನ್ನು ರಾಜನ ಮೇಲೆ ಭಂಗ ಬೀರುತ್ತದೆ. ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ ಎಂದು ಕಳೆದ ತಿಂಗಳು ಹೇಳಿದ್ದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರಲ್ಲೂ ಇದೇ ಆಗುತ್ತೆ. ಹಾಗಂತ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read