ಎಸಿ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಬೇಸಿಗೆಯ ಬಿಸಿಗೆ ರೋಸಿ ಹೋಗಿ ಪ್ರತಿಯೊಬ್ಬರು ಎಸಿಗೆ ಮೊರೆ ಹೋಗುತ್ತಿದ್ದಾರೆ. ಕಚೇರಿ ವಾತಾವರಣದಲ್ಲಿ ತಂಪಗೆ ಕೂರುವ ಸುಖವನ್ನು ಮನೆಯಲ್ಲೂ ಅನುಭವಿಸಲು ಮನೆಗೇ ಎಸಿ ಹಾಕಿಕೊಳ್ಳುವವರ ಸಂಖ್ಯೆ ಬಹುತೇಕ ಹೆಚ್ಚಿದೆ. ಅದರೆ ನೆನಪಿರಲಿ ಇದರಿಂದ ಅನಾರೋಗ್ಯವೂ ಹೆಚ್ಚುತ್ತದೆ.

ಮೊದಲ ಬಾರಿ ಎಸಿ ಬಳಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದಾವು. ಶೀತ, ಕೆಮ್ಮು ಪದೇ ಪದೇ ಕಾಣಿಸಿಕೊಂಡೀತು. ನಮ್ಮ ದೇಹ ತಂಪಿಗೆ ಒಗ್ಗಿಕೊಳ್ಳುವುದರಿಂದ ನೀರು ಕುಡಿಯುವುದನ್ನು ನಾವು ಮರೆತೇ ಬಿಡುತ್ತೇವೆ. ಇದು ದೇಹದ ನಿರ್ಜಲೀಕರಣಕ್ಕೂ ಕಾರಣವಾದೀತು.

ಎಸಿ ರೂಮಿನಲ್ಲಿ ಕುಳಿತಾಗ ನೀವು ಮೈ ಕೈಗೆ ಎಷ್ಟೇ ಮಾಯಿಸ್ಚರೈಸರ್ ಹಚ್ಚಿದರೂ ಅದು ಮಾಯವಾಗಿ ತ್ವಚೆ ಒರಟಾಗುತ್ತದೆ. ಕೃತಕ ತಂಪನ್ನು ತ್ವಚೆ ಸ್ವೀಕರಿಸಲು ಒಪ್ಪುವುದಿಲ್ಲ. ಹೆಚ್ಚು ಹೊತ್ತು ಎಸಿಯಡಿ ಕುಳಿತುಕೊಳ್ಳುವ ಮಂದಿಗೆ ಸೂರ್ಯನ ಪ್ರಖರ ಕಿರಣಗಳನ್ನು ಸಹಿಸುವ ಶಕ್ತಿಯೂ ಇರುವುದಿಲ್ಲ.

ಎಸಿಯ ಸೂಕ್ತ ನಿರ್ವಹಣೆ ನಡೆಯದಿದ್ದರೆ ಇದರಿಂದ ಅಲರ್ಜಿ ಅಥವಾ ಇತರ ಸೋಂಕುಗಳು ಕಾಣಿಸಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳಿವೆ. ಹಾಗಾಗಿ ಎಸಿ ಬಳಸುವ ಮುನ್ನ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯದೆ ಕೈಗೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read