ನವಜಾತ ಶಿಶುಗಳೊಡನೆ ಮಲಗುವ ಮುನ್ನ ತಿಳಿದಿರಲಿ ಈ ವಿಷಯ

ವಿದೇಶಗಳಲ್ಲಿ ಮಕ್ಕಳನ್ನು ಜೊತೆಗೆ ಮಲಗಿಸಿಕೊಳ್ಳದೇ ಪ್ರತ್ಯೇಕವಾದ ಬೆಡ್ ಅಥವಾ ತೊಟ್ಟಿಲಲ್ಲಿ ಮಲಗಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಇದರ ಹಿಂದಿರುವ ನಿಜವಾದ ಕಾರಣ ಏನು ಗೊತ್ತೇ…?

ನವಜಾತ ಶಿಶುವಿನ ಜೊತೆ ಮಲುಗುವುದು ಸುರಕ್ಷಿತವಲ್ಲ ಎಂಬುದನ್ನು ಸಂಶೋಧನೆಗಳೂ ಬಹಿರಂಗಪಡಿಸಿವೆ. ಮಗುವಿನ ಹಾಸಿಗೆ ಮೃದುವಾಗಿದ್ದು, ಅರಾಮದಾಯಕವಾಗಿರಬೇಕು, ಮಕ್ಕಳು ನೆಮ್ಮದಿಯಿಂದ ಮಲಗಬೇಕು.

ದೊಡ್ಡವರೊಂದಿಗೆ ಮಲಗುವುದರಿಂದ ಉಸಿರಾಟದ ತೊಂದರೆ ಮೊದಲಾದ ಸಮಸ್ಯೆ ಕಾಡಬಹುದು, ಅಮ್ಲಜನಕದ ಕೊರತೆಯೂ ಉಂಟಾಗಬಹುದು ಎಂದಿದೆ.

ಶೈಶವಾವಸ್ಥೆಯಲ್ಲಿ ಹೆಚ್ಚುತ್ತಿರುವ ಮಗುವಿನ ಹಠಾತ್ ಸಾವಿಗೆ ಕೋ ಸ್ಲೀಪಿಂಗ್ ಸಹ ಮುಖ್ಯ ಅಂಶ ಎಂದು ಸಂಶೋಧನೆ ಹೇಳಿದೆ.

ಅಕಾಲಿಕವಾಗಿ ಜನಿಸಿದ ಮಗು ಸಣ್ಣಕ್ಕಿದ್ದು, ಕಡಿಮೆ ತೂಕ ಹೊಂದಿದ್ದರೆ ಈ ಅಪಾಯ ಹೆಚ್ಚಿರುತ್ತದೆ. ಬಾಯಿಯ ಬಳಿ ಹೊದಿಕೆ ಬಂದರೆ, ತಲೆದಿಂಬು ಗಟ್ಟಿಯಾಗಿದ್ದರೆ ಮಗುವಿಗೆ ಸರಿಯಾಗಿ ಅಮ್ಲಜನಕ ಸಿಗದೆ ಇರಬಹುದು.

ಸಾಕುಪ್ರಾಣಿಗಳು ನಿಮ್ಮ ಹಾಸಿಗೆಯಲ್ಲಿ ಜೊತೆಗೆ ಮಲಗುತ್ತಿದ್ದರೆ ಅದು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಸಂಶೋಧನೆ ಹೇಳಿದೆ.

ಕೋ ಸ್ಲೀಪಿಂಗ್ ನಿಂದ ಮಗು – ತಾಯಿಯ ಬಂಧ ಉತ್ತೇಜನಗೊಳ್ಳುತ್ತದೆ, ಮಗುವಿಗೆ ಸುರಕ್ಷಿತ ಭಾವ ದೊರೆಯುತ್ತದೆ ಎಂಬುದೆಲ್ಲಾ ನಿಜವೆ. ಅದರೆ ತಾಯಿಯಾದವಳು ನವಜಾತ ಶಿಶುವಿನ ಬಗ್ಗೆ ಅಷ್ಟೇ ಎಚ್ಚರ ವಹಿಸಬೇಕು ಎಂಬುದೂ ಸತ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read