ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ತಮ್ಮ ಹೆಣ್ಣು ಮಗುವಿಗೆ ಹೆಸರಿಟ್ಟಿದ್ದಾರೆ! ಈ ವರ್ಷದ ಮಾರ್ಚ್ 24 ರಂದು ಈ ಜೋಡಿ ಹೆಣ್ಣು ಮಗುವಿಗೆ ಪೋಷಕರಾದರು ಮತ್ತು ಈ ಸಂತೋಷದ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಈ ಹೊಸ ಪೋಷಕರು ತಮ್ಮ ಮಗಳಿಗೆ ‘ಇವಾರಾ’ ಎಂದು ಹೆಸರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ಚಿತ್ರವನ್ನು ಹಂಚಿಕೊಂಡಿರುವ ಈ ಜೋಡಿ, ಮಗು ರಾಹುಲ್ ಅವರ ತೋಳುಗಳಲ್ಲಿ ಮಲಗಿದ್ದು, ಅಥಿಯಾ ಶೆಟ್ಟಿ ಪ್ರೀತಿಯಿಂದ ನೋಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲಿ ಮಗುವಿನ ಹೆಸರು ಮತ್ತು ಅದರ ಅರ್ಥವನ್ನು ಅವರು ತಿಳಿಸಿದ್ದಾರೆ. “ನಮ್ಮ ಪುಟ್ಟ ಮಗಳು, ನಮ್ಮೆಲ್ಲವೂ. ಇವಾರಾ/ इवारा ~ ದೇವರ ಕಾಣಿಕೆ,” ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಕೆ.ಎಲ್. ರಾಹುಲ್ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿದ್ದು, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.