SSLC, ITI ಪಾಸಾದವರಿಗೆ ಗುಡ್ ನ್ಯೂಸ್: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ನೇರ ಸಂದರ್ಶನ

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ಘಟಕಗಳಲ್ಲಿ ಐಟಿಐ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅಪ್ರೆಂಟಿಶಿಪ್ ತರಬೇತಿಗಾಗಿ ಮಾ.23ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಎಸ್.ಪಿ.ಸರ್ಕಲ್ ಹತ್ತಿರದ ಸಿರುಗುಪ್ಪ ರಸ್ತೆಯ ಕಕರಸಾನಿ ಬಳ್ಳಾರಿ ವಿಭಾಗೀಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಬಳ್ಳಾರಿ ವಿಭಾಗದ ಬಳ್ಳಾರಿ-2 ಘಟಕ, ಬಳ್ಳಾರಿ-3 ಘಟಕ, ಸಿರುಗುಪ್ಪ ಘಟಕಗಳಲ್ಲಿ ಅಟೋಎಲೆಕ್ಟ್ರಿಷಿಯನ್ 6, ಡೀಸೆಲ್ ಮೆಕಾನಿಕ್ 10, ಎಂ.ಎಂ.ವಿ ವಿಭಾಗದಲ್ಲಿ 7 ಸೇರಿ ಒಟ್ಟು 23 ಸ್ಥಾನಗಳಿವೆ.

ಅಗತ್ಯವಿರುವ ದಾಖಲೆಗಳು:

ದಾಖಲೆ ಪ್ರತಿಗಳ ದೃಢೀಕರಣದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕಾಗಿದ್ದು, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐ.ಟಿ.ಐ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಪುಸ್ತಕ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಮೊ.9880120611, 9916164369 ಮತ್ತು 7760992153 ಅಥವಾ  www.kkrtc.karnataka.gov.in ವೆಬ್‍ಸೈಟ್ ಗೆ ಭೇಟಿ ನೀಡಬಹುದಾಗಿದೆ ಎಂದು ಕೆಕೆಆರ್‍ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read