ಮೂರು ದಿನಗಳ ಕಾಲ ಪೈಪ್‌ನಲ್ಲಿ ಸಿಕ್ಕಿಬಿದ್ದಿದ್ದ ಬೆಕ್ಕಿನ ಮರಿಯ ರಕ್ಷಣೆಯೇ ರೋಚಕ

ಮಾನವೀಯತೆ ಕಳೆದುಹೋಗಿದೆ ಎಂಬ ಮಾತುಗಳ ಮಧ್ಯೆ, ಕೆಲವರು ಒಳ್ಳೆಯ ವ್ಯಕ್ತಿಗಳಿಂದ ಇನ್ನೂ ಕೂಡ ಮಾನವೀಯತೆ ಉಳಿದಿದೆ ಎಂಬುದು ಆಗಾಗ ಸಾಬೀತಾಗಿದೆ. ಇದೀಗ ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮೂರು ದಿನಗಳ ಕಾಲ ಮಳೆ ನೀರು ಹೋಗುವ ಪೈಪ್‌ನಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲಾಗಿದೆ.

ಹೌದು, ಲೆಬನಾನ್‌ನ ಬೈರುತ್‌ನಲ್ಲಿ ಪೈಪ್‌ನಲ್ಲಿ ಈ ಪುಟ್ಟ ಜೀವಿ ಸಿಕ್ಕಿಬಿದ್ದಿದ್ದು, ಅನಿಮಲ್ಸ್ ಲೆಬನಾನ್ ಚಾರಿಟಿಯ ಸ್ವಯಂಸೇವಕರು ಅದನ್ನು ರಕ್ಷಿಸಿದ್ದಾರೆ. ಬೆಕ್ಕನ್ನು ಹೊರತೆಗೆಯುವ ಮೊದಲು ಅದರ ನಿಖರವಾದ ಸ್ಥಳವನ್ನು ಗುರುತಿಸಲು ಸಣ್ಣ ಕ್ಯಾಮರಾಗಳನ್ನು ಬಳಸಲಾಯಿತು. ಪೈಪ್ ನಿಂದ ಬೆಕ್ಕನ್ನು ಹೊರತೆಗೆದ ನಂತರ, ನೆರೆದಿದ್ದ ಜನರು ರಕ್ಷಣಾ ಕಾರ್ಯಕರ್ತರನ್ನು ಶ್ಲಾಘಿಸಿದ್ರು.

ಈ ವಾರದ ಆರಂಭದಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪೈಪ್ ನಲ್ಲಿ ಸಿಲುಕಿಕೊಂಡಿದ್ದ ಎಂಟು ವಾರಗಳ ಬೆಕ್ಕಿನ ಮರಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು. ನಾಟಿಂಗ್‌ಹ್ಯಾಮ್‌ಶೈರ್ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯು ರಕ್ಷಿಸಲ್ಪಟ್ಟ ಬೆಕ್ಕು ಇದೀಗ ಪಶುವೈದ್ಯರ ನಿಗಾದಲ್ಲಿದೆ ಎಂದು ಹೇಳಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read