ಸೋಮಾರಿ ಸಿಂಹಗಳ ವಿಡಿಯೋ ಶೇರ್​ ಮಾಡಿದ ಸಚಿವರು

Kiren Rijiju shares rare video of lionesses sitting on trees on World Wildlife Day. Watch - India Todayಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾರ್ಚ್ 3 ರಂದು ತಮ್ಮ ಅನುಯಾಯಿಗಳಿಗೆ ವಿಶ್ವ ವನ್ಯಜೀವಿ ದಿನ 2023 ರಂದು ಶುಭಾಶಯ ಕೋರಿದ್ದು, ಈ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಕುತೂಹಲದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಮರಗಳ ಕೊಂಬೆಗಳ ಮೇಲೆ ಸೋಮಾರಿಯಾಗಿ ಕುಳಿತಿರುವ ಸಿಂಹಿಣಿಗಳ ಗುಂಪನ್ನು ಒಳಗೊಂಡ ನಂಬಲಾಗದ ವೀಡಿಯೊವನ್ನು ರಿಜಿಜು ಹಂಚಿಕೊಂಡಿದ್ದಾರೆ. ನಂಬಲು ಕಷ್ಟಕರವಾದ ದೃಶ್ಯವು ಜನರನ್ನು ಬೆರಗುಗೊಳಿಸಿದೆ. ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು ಎಂದು ಈ ಫೋಟೋ ಶೇರ್​ ಮಾಡಿ ರಿಜುಜು ಬರೆದಿದ್ದಾರೆ.

ವೀಡಿಯೊ 22.6k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಟ್ವಿಟ್ಟರ್ ಬಳಕೆದಾರರು ವೀಡಿಯೊ ಎಷ್ಟು ಅನನ್ಯ ಮತ್ತು ಸುಂದರ ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಇಂಥ ಒಂದು ಅಪರೂಪದ ವಿಡಿಯೋ ಶೇರ್​ ಮಾಡಿದ್ದಕ್ಕೆ ರಿಜಿಜು ಅವರಿಗೆ ಧನ್ಯವಾದಗಳ ಸುರಿಮಳೆಯಾಗುತ್ತಿದೆ. ಜೊತೆಗೆ ಇವು ಸಿಂಹಿಣಿಯಾಗಿರುವ ಹಿನ್ನೆಲೆಯಲ್ಲಿ ಪುರುಷರು ಸೋಮಾರಿ ಮಹಿಳೆಯರ ಬಗ್ಗೆ ತಮಾಷೆಯ ಕಮೆಂಟ್​ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read