ಬೆಂಗಳೂರು : ‘ಚಾರ್ಲಿ’ ಚಿತ್ರದ ನಿರ್ದೇಶಕ ಕಿರಣ್ ರಾಜ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಿರಣ್ ರಾಜ್ ಅವರು ಕಾಸರಗೋಡಿನ ನಾರಂಪಾಡಿ ದೇವಾಲಯದಲ್ಲಿ ಅನಯಾ ವಸುಧಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾಸರಗೋಡು ಮೂಲದ ಕಿರಣ್ ರಾಜ್ ಹಾಗೂ ಅನಯಾ ವಸುಧಾ ಕಳೆದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಚಾರ್ಲಿ ಸಿನಿಮಾ 2022 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದರು.
