BIG NEWS: ನಟಿಯಂತೆ ಕಾಣಲು ವಿಪರೀತ ಕಾಸ್ಮೆಟಿಕ್ ಸರ್ಜರಿ; ಮಾಡೆಲ್ ದುರಂತ ಸಾವು

ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಕಿಮ್ ಕರ್ದಾಶಿಯನ್‌ರಂತೆ ಕಾಣುತ್ತಿದ್ದ ಮಾಡೆಲ್‌ ಒಬ್ಬರು ತಮ್ಮ 34ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಹೆಸರಿನ ಈಕೆಗೆ ಪ್ಲಾಸ್ಟಿಕ್ ಸರ್ಜರಿಯ ಕ್ರಿಯೆಗಳು ಪ್ರತಿಕೂಲಗೊಂಡ ಕಾರಣ ಈ ಪರಿಸ್ಥಿತಿ ಬಂದಿದೆ.

ಕ್ರಿಸ್ಟಿನಾ ಕುಟುಂಬ ಸ್ಥಾಪಿಸಿರುವ ಗೋ‌ ಫಂಡ್‌ ಮೀ ಅಭಿಯಾನದ ಮೂಲಕ ಆಕೆ ಸಾವಿನ ಸುದ್ದಿ ಹರಡಿದೆ. ಹೃದಯಸ್ಥಂಭನದಿಂದ ಕ್ರಿಸ್ಟಿನಾ ಆರೋಗ್ಯದಲ್ಲಿ ದಿಢೀರ್‌ ಬದಲಾವಣೆಯಾಗಿರುವ ವಿಚಾರವನ್ನು ಆಸ್ಪತ್ರೆಯ ಮೂಲಗಳು ಕಳೆದ ವಾರ ಆಕೆಯ ಕುಟುಂಬಕ್ಕೆ ತಿಳಿಸಿದ್ದವು.

ಪ್ಲಾಸ್ಟಿಕ್ ಸರ್ಜರಿಯಿಂದಲೇ ಕ್ರಿಸ್ಟಿನಾ ಸಾವು ಸಂಭವಿಸಿದೆ ಎನ್ನುವ ಆಕೆಯ ಕುಟುಂಬಸ್ಥರು ಈ ಸಂಬಂಧ ಹೆಚ್ಚಿನ ವಿವರಗಳನ್ನು ಕೊಟ್ಟಿಲ್ಲ. ಇದೇ ವೇಳೆ, ಗೋಫಂಡ್‌ಮೀ ಅಭಿಯಾನದ ಮೂಲಕ $40,000ಗಳನ್ನು ಆಕೆಯ ಸ್ಮಾರಕ ನಿರ್ಮಾಣಕ್ಕೆ ಸಂಗ್ರಹಿಸುವ ಯೋಜನೆಯನ್ನು ಆಕೆಯ ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ.

ಕೆನಡಾದ ನಟ ಸೇಂಟ್ ವಾನ್ ಕಾಲುಕ್ಕಿ ಇದೇ ರೀತಿ ಕಾಸ್ಮೆಟಿಕ್ ವೈದ್ಯಕೀಯ ಕ್ರಿಯೆಗಳಿಗೆ ಬಲಿಯಾದ ಕೆಲವೇ ದಿನಗಳಲ್ಲಿ ಕ್ರಿಸ್ಟಿನಾ ಸಾವಿನ ಸುದ್ದಿ ಕೇಳಿ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read