ತಾಂಜೇನಿಯಾದ ಒಡಹುಟ್ಟಿದವರ ಮತ್ತೊಂದು ನೃತ್ಯ ವೈರಲ್​: ನೆಟ್ಟಿಗರು ಫಿದಾ

ತಾಂಜೇನಿಯಾ: ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆಯರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಹಾಡುಗಳಿಗೆ ಹಾಡುವ ಅಥವಾ ನೃತ್ಯ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ.

ಬಹಳ ಹಿಂದೆಯೇ ನೀಮಾ ಅವರು ಖಲಾ ಚಿತ್ರದ ಘೋಡೆ ಪೆ ಸವಾರ್ ಹಾಡುವ ವೀಡಿಯೊವನ್ನು ಹಂಚಿಕೊಂಡಿದ್ದು ಭಾರಿ ವೈರಲ್​ ಆಗಿತ್ತು. ಇದೀಗ ಮತ್ತೊಂದು ಡ್ಯಾನ್ಸ್ ವಿಡಿಯೋ ಮೂಲಕ ಮತ್ತೆ ಜೋಡಿಯಾಗಿದ್ದಾರೆ.

ಈ ಬಾರಿ ಕಿಲಿ ಮತ್ತು ನೀಮಾ ಪೌಲ್ ನೃತ್ಯ ಮಾಡಲು ಸಪ್ನಾ ಚೌಧರಿ ಅವರ ಹಿಟ್ ಹರ್ಯಾನ್ವಿ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾಂಜೇನಿಯಾದ ಈ ಸಹೋದರಿಯರು ತೇರಿ ಆಖ್ಯ ಕಾ ಯೋ ಕಾಜಲ್ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ಹಾಡು 2018 ರಲ್ಲಿ ಬಿಡುಗಡೆಯಾದ ನಂತರ ತುಂಬಾ ಕ್ರೇಜಿ ವೈರಲ್ ಆಗಿದೆ. ಇದು ಮದುವೆಗಳಲ್ಲಿ ಆಗಾಗ್ಗೆ ಪ್ಲೇ ಆಗುವ ಹಾಡು.

ಈ ವಿಡಿಯೋ ಈಗಾಗಲೇ 83k ಲೈಕ್‌ಗಳನ್ನು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಪ್ರತಿಭಾವಂತರಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಹರ್ಯಾನ್ವಿ ಹಾಡನ್ನು ಆಯ್ಕೆ ಮಾಡಿದ್ದಕ್ಕಾಗಿ ಹಲವರು ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

https://www.youtube.com/watch?v=npu-onOwK7A

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read