ಆನೇಕಲ್: ಕಿಡ್ನ್ಯಾಪ್ ಹಾಗೂ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಆತನನ್ನು ಬಂಧ್ಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ಬೊಮ್ಮಸಂದ್ರ ಸ್ಮಶಾನದ ಬಳಿ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ. ರವಿ ಪ್ರಸಾದ್ ರೆಡ್ಡಿ ಬಂಧಿತ ಆರೋಪಿ. ಬಾಲಪ್ಪ ರೆಡ್ಡಿ ಎಂಬುವವರನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಹಣ ಕೊಡದಿದ್ದಾಗ ಬಾಲಪ್ಪ ಅವರನ್ನು ತಮಿಳುನಾಡಿನ ಶಾನಮಾವು ಕಾಡಿನಲ್ಲಿ ಬಾಲಪ್ಪ ರೆಡ್ಡಿಯ ಕತ್ತು ಸೀಳಿ ಕೊಲೆಗೈದು ಮೃತದೇಹವನ್ನು ಕಾಡಿನಲ್ಲಿ ಎಸೆದು ಎಸ್ಕೇಪ್ ಆಗಿದ್ದ. ಟೆಕ್ನಿಕಲ್ ದಾಖಲೆ ಆಧರಿಸಿ ಆರೋಪಿ ರವಿಯನ್ನು ಬಂಧಿಸಲಾಗಿತ್ತು. ಆದರೆ ಸ್ಥಳಮಹಜರು ವೇಳೆ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಸೋಮಶೇಖರ್ ಆರೋಪಿ ಕಾಲಿಗೆ ಗುಂಡೇಟು ಹೊಡೆದು ರಕ್ಷಿಸಿದ್ದಾರೆ.
