ಹಾಡಹಗಲೇ ಶಿಕ್ಷಕಿ ಅಪಹರಿಸಿದ್ದ ಸಂಬಂಧಿ ಸೇರಿ ಆರೋಪಿಗಳು ಅರೆಸ್ಟ್

ಹಾಸನ: ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಸಮೀಪ ಗುರುವಾರ ಬೆಳಿಗ್ಗೆ ಖಾಸಗಿ ಶಾಲೆಯ ಶಿಕ್ಷಕಿ ಅಪಹರಿಸಿದ್ದ ಸಂಬಂಧಿ ರಾಮು ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕಿ ಅರ್ಪಿತಾ ಅವರನ್ನು ಅಪಹರಿಸಿದ್ದ ಆರೋಪಿಗಳು ಸೋಮವಾರಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪ ಬಂಧಿಸಲಾಗಿದೆ.

ಅರ್ಪಿತಾ ಶಾಲೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದು ಎತ್ತಿಕೊಂಡು ಕಾರ್ ನಲ್ಲಿ ಅಪರಿಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದ್ದವು. 15 ದಿನಗಳ ಹಿಂದೆ ಅರ್ಪಿತಾ ಅವರ ಸಂಬಂಧಿ ರಾಮು ಮತ್ತು ಆತನ ಪೋಷಕರು ಮದುವೆ ವಿಷಯ ಪ್ರಸ್ತಾಪಿಸಲು ಮನೆಗೆ ಬಂದಿದ್ದರು. ಮದುವೆಗೆ ಅರ್ಪಿತಾ ವಿರೋಧ ವ್ಯಕ್ತಪಡಿಸಿದ್ದರು. ಆಕೆ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿರೆ.

ಅರ್ಪಿತಾ ಅಪಹರಣವಾದ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಮೂರು ತಂಡ ರಚಿಸಲಾಗಿತ್ತು. ಮೊಬೈಲ್ ಲೊಕೇಶನ್ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್.ಪಿ. ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read