ಪುಟ್ಟ ಮಗನೊಂದಿಗೆ ಆಟಿಕೆ ಕಾರಿನಲ್ಲಿ ಕುಳಿತು ತೆರಳಿದ ತಂದೆ | Viral Video

ತಂದೆ ಹಾಗೂ ಮಕ್ಕಳ ನಡುವಿನ ಬಂಧವನ್ನು ವರ್ಣಿಸಲು ಸಾಧ್ಯವಿಲ್ಲ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಈ ಮಾತಿಗೆ ಹೇಳಿ ಮಾಡಿಸಿದಂತಹ ವಿಡಿಯೋವೊಂದು ವೈರಲ್​ ಆಗಿದೆ.

ತಂದೆ ಹಾಗೂ ಮಗ ಇಬ್ಬರು ಊಟಕ್ಕೆಂದು ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಇದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಅಚ್ಚರಿಯ ವಿಚಾರ ಏನಂದ್ರೆ ಮಗನ ಮಿನಿ ಆಟಿಕೆ ಕಾರಿನಲ್ಲಿ ಕುಳಿತು ತಂದೆ, ಮಗನೊಂದಿಗೆ ಹೋಟೆಲ್​ಗೆ ತೆರಳಿದ್ದಾರೆ.

ಅಂದಹಾಗೆ ಈ ಮಿನಿಕಾರನ್ನು ಪುತ್ರನೇ ಡ್ರೈವ್​ ಮಾಡಿದ್ದಾನೆ ಹಾಗೂ ತಂದೆ ಪಕ್ಕದಲ್ಲಿ ಕುಳಿತಿದ್ದಾರೆ. ಆಟಿಕೆ ಕಾರಿನಲ್ಲಿ ಕುಳಿತುಕೊಂಡೇ ಪುತ್ರ ಊಟ ಆರ್ಡರ್​ ಮಾಡಿದ್ದಾನೆ. ಇದೀಗ ಈ ಮುದ್ದಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಇದು ಹಳೆ ವಿಡಿಯೋವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡ್ತಿದೆ.

ಇವರ ಪ್ರೀತಿ ಎದುರು ದೊಡ್ಡ ದೊಡ್ಡ ಕಾರುಗಳೇ ಸಣ್ಣ ಎನಿಸುತ್ತಿದೆ ಎಂದು ಈ ವಿಡಿಯೋವನ್ನು ಪೋಸ್ಟ್​ ಮಾಡಿದ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಮಿಲಿಯನ್​ಗಟ್ಟಲೇ ವೀವ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read