ಬೆಂಗಳೂರು: ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಇಂತದ್ದೊಂದು ಪ್ರಶ್ನೆಗೆ ಸ್ವತಃ ಸುದೀಪ್ ಅಚ್ಚರಿ ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ಆದರೆ ಆಗಾಗ ರಾಜಕೀಯಕ್ಕೆ ಬರುವ ಹಾಗೆ ಕೆಲವರು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ನಾನು ರಾಜಕೀಯಕ್ಕೆ ಬಂದ್ರೂ ಬದಲಾಗಲ್ಲ. ನಾನು ಬದಲಾಗದ ಹಾಗೆ ನನ್ನ ನಟ್ಟು ಟೈಟ್ ಮಾಡಿಕೊಳ್ತೀನಿ. ಕೆಲವೊಮ್ಮೆ ರಾಜಕೀಯಕ್ಕೆ ಬರಬೇಕು ಅನ್ನಿಸುತ್ತೆ. ಆದರೆ ರಾಜಕೀಯಕ್ಕೆ ಬರಬೇಕು ಅಂತೇನೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
‘ಸಿನಿಮಾದವರ ನಟ್ಟು, ಬೋಲ್ಟು ಟೈಟ್ ಮಾಡುವುದು ಗೊತ್ತಿದೆ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ನಟ್ಟು, ಬೋಲ್ಟ್ ಟೈಟ್ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿಕೊಟ್ಟಿದ್ದು ಸಾಧುಕೋಕಿಲಾ. ಅದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದು ಅಲ್ಲ. ರಾಜಕೀಯಕ್ಕೆ ಬಂದ್ರೆ ನನ್ನ ನಟ್ಟು ಟೈಟ್ ಮಾಡಿಕೊಳ್ತೀನಿ. ನಾನು ಬದಲಾಗದ ಹಾಗೆ ನಟ್ಟು ಟೈಟ್ ಮಾಡಿಕೊಳ್ತೀನಿ ಎಂದು ಟಾಂಗ್ ನೀಡಿದರು.