BIG NEWS: ಏರ್ ಪೋರ್ಟ್ ಸುತ್ತಮುತ್ತ ದಟ್ಟ ಮಂಜು: ಕೆಐಎಯಲ್ಲಿ 34 ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು: ಹವಾಮಾನ ವೈಫರಿತ್ಯದಿಂದಾಗಿ ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾಗಿದೆ.

ದಟ್ಟವಾದ ಮಂಜು, ಮೋಡಕವಿದ ವಾತಾವರಣದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸುಮಾರು 34 ವಿಮಾನಗಳ ಹಾರಾಟ ತಡವಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟ ಮಂಜು ಕವಿದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಗಂಟೆಗೂ ಹೆಚ್ಚು ಕಾಲದಿಂದ ಯಾವುದೇ ವಿಮಾನ ಟೇಕ್ ಆಫ್ ಆಗಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ .

ಮಂಜು ಮುಸುಕಿರುವ ಹಿನ್ನೆಲೆಯಲ್ಲಿ ರನ್ ವೇ ಸರಿಯಾಗಿ ಕಾಣುತ್ತಿಲ್ಲ. ಹವಾಮಾನ ವೈಫರಿತ್ಯ ಕಾರಣಕ್ಕೆ 34 ವಿಮಾನ ಹಾರಾಟ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read