‘KGF’ ನಿರ್ದೇಶಕರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ‘ಪ್ರಿಯಾಂಕಾ ಚೋಪ್ರಾ’

Priyanka Chopra Jonas and Jr. NTR: A Powerhouse Pairing in Prashant Neel's  Next Film?ಕನ್ನಡದ ಕೆ.ಜಿ.ಎಫ್ ಸಿನಿಮಾದ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್ ( Prashant Neel) ಅವರೊಂದಿಗೆ ಜೂನಿಯರ್ ಎನ್ ಟಿ ಆರ್ ಒಂದು ಚಿತ್ರಕ್ಕೆ ಸಹಿ ಹಾಕಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

ಇನ್ನೂ, ಸಿನಿಮಾದ ಟೈಟಲ್ ಫಿಕ್ಸ್ ಆಗಿಲ್ಲ, ಸದ್ಯ ಚಿತ್ರಕ್ಕೆ ಎನ್ ಟಿ ಆರ್ 31 (NTR 31) ಎಂದು ಹೆಸರಿಡಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಯಿದೆ. ಜೂನಿಯರ್ ಎನ್ ಟಿ ಆರ್ 31 ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಈ ಸಿನಿಮಾ ತಯಾರಾಗುತ್ತಿದೆ. ಜೂನಿಯರ್ ಎನ್ ಟಿ ಆರ್ ಸಹೋದರ ನಂದಮೂರಿ ಕಲ್ಯಾಣ್ರಾಮ್ ಅವರ ಪ್ರೊಡಕ್ಷನ್ ಹೌಸ್ ಎನ್ ಟಿ ಆರ್ ಆರ್ಟ್ಸ್ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಈ ಚಿತ್ರದಲ್ಲಿ ನಟಿಸಲು ಬಾಲಿವುಡ್ ಬೆಡಗಿ, ನಟಿ ಪ್ರಿಯಾಂಕಾ ಚೋಪ್ರಾ (Priyanka Chopra)ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಪ್ರಿಯಾಂಕಾ ಪಾತ್ರ ಏನಿರಬಹುದು ಎಂಬ ಕುತೂಹಲ ಮೂಡಿದೆ. ಪ್ರಶಾಂತ್ ನೀಲ್ (Prashant Neil) ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಇದೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರದ ಕಥೆ ಇಂಡಿಯಾ-ಪಾಕಿಸ್ತಾನ ಗಡಿಯಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾವುದಕ್ಕೂ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಕಾದು ನೋಡಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read