ಗಂಟಲಲ್ಲಿ ಚಕ್ಕುಲಿ ಸಿಲುಕಿ ಮಗು ದುರ್ಮರಣ

ತಿರುವನಂತಪುರ: ಒಂದುವರೆ ವರ್ಷದ ಮಗು ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

ವೈಷ್ಣವ್ ಮೃತ ಮಗು. ವಿಜೇಶ್ ಹಾಗೂ ದಿವ್ಯಾ ದಾಸ್ ಎಂಬುವವರ ಅವಳಿ ಮಕ್ಕಳಲ್ಲಿ ವೈಷ್ಣವ್ ಕೂಡ ಒಬ್ಬ. ಬಾಲಕ ಚಕ್ಕುಲಿ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ಇದ್ದ. ಈ ವೇಳೆ ಏಕಾಏಕಿ ಚಕ್ಕುಲಿ ಗಂಟಲಲ್ಲಿ ಸಿಲುಕಿದೆ. ಉಸಿರಾಡಲು ಸಾಧ್ಯವಾಗದೇ ಮಗು ಕಷ್ಟಪಡುತ್ತಿತ್ತು.

ಇದನ್ನು ಗಮನಿಸಿದ ಪೋಷಕರು ತಕ್ಷಣ ಮಗುವನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಮಗು ಉಸಿರು ಚೆಲ್ಲಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read