ಬೈಕ್ ಸವಾರನ ಭೀಕರ ದುರಂತ ಸಾವು; ಆಘಾತಕಾರಿ ವಿಡಿಯೋ ವೈರಲ್

ರಸ್ತೆಯಲ್ಲಿ ವಾಹನ ಸವಾರರ ಹೈಸ್ಪೀಡ್ ಗೆ ಆಗುವಂತಹ ಅಪಾಯಗಳು ಒಂದೆರಡಲ್ಲ. ಅಜಾಗರೂಕತೆ ಮತ್ತು ನಿರ್ಲಕ್ಯ್ಪ ಚಾಲನೆಯಿಂದ ಇತರರ ಪ್ರಾಣಕ್ಕೆ ಕುತ್ತು ತರುವುದಲ್ಲದೇ, ತಮ್ಮ ಪ್ರಾಣಕ್ಕೂ ಕಂಟಕ ತಂದುಕೊಳ್ಳುತ್ತಾರೆ. ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಹಗ್ಗವನ್ನು ನೋಡದೇ ಹೈಸ್ಪೀಡ್ ನಲ್ಲಿ ಬಂದು ಕೇರಳದಲ್ಲಿ ಬೈಕ್ ಸವಾರ ಪ್ರಾಣ ಬಿಟ್ಟ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಚ್ಚಿಬೀಳಿಸಿದೆ.

ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು , ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯ ಇದೀಗ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ. 28 ವರ್ಷದ ಮನೋಜ್ ಉನ್ನಿ ಎಂದು ಗುರುತಿಸಲಾದ ಬೈಕ್ ಸವಾರರೊಬ್ಬರು ಕೊಚ್ಚಿಯ ವಲಂಜಂಬಲಂನಲ್ಲಿ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬೈಕ್‌ನಿಂದ ಬಿದ್ದಿರುವುದನ್ನು ವೀಡಿಯೊ ತೋರಿಸುತ್ತದೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಭದ್ರತಾ ಕ್ರಮಗಳ ಭಾಗವಾಗಿ ಹಗ್ಗವನ್ನು ಕಟ್ಟಲಾಗಿತ್ತು. ತಾಯಿಗೆ ಔಷಧಿ ಖರೀದಿಸಿ ಮನೆಗೆ ಮರಳುತ್ತಿದ್ದ ಮನೋಜ್ ಉನ್ನಿ ಈ ದುರ್ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಈ ವಿಡಿಯೋ ಹಂಚಿಕೊಂಡು ಕೆಲವರು ರಸ್ತೆಯನ್ನು ಬ್ಲಾಕ್ ಮಾಡುವ ರೀತಿ ಇದೇನಾ ಎಂದು ಪೊಲೀಸರನ್ನ ಪ್ರಶ್ನಿಸಿದ್ರೆ, ಕೆಲವರು ಯುವಕ ಹೈಸ್ಪೀಡ್ ನಲ್ಲಿ ಹೋಗ್ತಿದ್ದೇ ಘಟನೆಗೆ ಕಾರಣವೆಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆದಿವೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read