SHOCKING: ಟಿಕೆಟ್ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿಂದ ತಳ್ಳಿದ ಕುಡುಕ: ಟಿಟಿಇ ಸಾವು

ಟಿಕೆಟ್ ಕೇಳಿದ ಟಿಟಿಇ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಕುಡುಕನೊಬ್ಬ ತಳ್ಳಿದ್ದರಿಂದ ಮೃತಪಟ್ಟಿದ್ದಾರೆ. ಕೇರಳದಲ್ಲಿ ಎರ್ನಾಕುಲಂ-ಪಾಟ್ನಾ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಘಟನೆ ನಡೆದಿದೆ.

ಪಾಟ್ನಾ ಸೂಪರ್‌ಫಾಸ್ಟ್ ರೈಲಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಟಿಟಿಇ ಇ.ಕೆ. ವಿನೋದ್ ಮೃತಪಟ್ಟಿದ್ದಾರೆ.. ಚಲಿಸುತ್ತಿದ್ದ ರೈಲಿನಿಂದ ಅವರನ್ನು ಮದ್ಯಪಾನ ಮಾಡಿದ್ದ ಪ್ರಯಾಣಿಕ ತಳ್ಳಿದ್ದಾನೆ. ಮಂಗಳವಾರ ಸಂಜೆ 7 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಕೇರಳ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್‌ನ ಎಸ್ 11 ಕೋಚ್‌ ನಲ್ಲಿ ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ರೈಲು ನಿಲ್ದಾಣಗಳ ನಡುವೆ ವೆಲಪ್ಪಯ(ತ್ರಿಶೂರ್) ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಒಡಿಶಾ ಮೂಲದ ವಲಸೆ ಕಾರ್ಮಿಕನಾಗಿದ್ದು, ಘಟನೆ ನಡೆದಾಗ ಆತ ಕುಡಿದಿದ್ದ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read