ತೃತೀಯ ಲಿಂಗಿ ದಂಪತಿಯಿಂದ ಮುದ್ದಾದ ಮಗುವಿಗೆ ನಾಮಕರಣ: ಕನಸು ನನಸಾದ ಖುಷಿಯಲ್ಲಿ ಜಿಯಾ ಮತ್ತು ಜಹಾದ್

ಕೆಲವೇ ಕೆಲವು ತಿಂಗಳ ಹಿಂದಿನ ಮಾತು ಕೇರಳದ ತೃತಿಯ ಲಿಂಗಿ ದಂಪತಿ ಒಂದು ಮಗುವಿಗೆ ಅಪ್ಪ-ಅಮ್ಮ ಆಗಿದ್ದರು. ಇತ್ತಿಚೆಗೆ ಅದೇ ಜೋಡಿ ಮಗುವಿನ ನಾಮಕರಣದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರಿಗೆ ಹೆಣ್ಣು ಮಗು ಹುಟ್ಟಿರುವುದಾಗಿ ಹೇಳಿಕೊಂಡಿದ್ದು, ಆ ಮಗುವಿಗೆ ಜಬಿಯಾ ಸಹದ್ ಎಂದು ಹೆಸರನ್ನ ಇಟ್ಟಿದ್ದಾರೆ.

ಕೇರಳದ ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಯಾದ್ ಕೆಲ ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ದಂಪತಿ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಯಾದ್ ಗೆ ಕಳೆದ ಫೆಬ್ರವರಿ 2ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ಅಂದು ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ದಂಪತಿ ನಿರಾಕರಿಸಿದ್ದರು. ಈಗ ತಮಗೆ ಹುಟ್ಟಿರುವುದು ಹೆಣ್ಣು ಮಗುವೆಂದು ಹೇಳಿಕೊಂಡಿದ್ದು, ಅದೇ ಮಗುವಿಗೆ ಜಬಿಯಾ ಸಹದ್ ಎಂದು ನಾಮಕರಣ ಮಾಡಿದ್ದಾರೆ.

ದಂಪತಿಗಳಿಗೆ ಮಗುವೊಂದನ್ನು ತಮ್ಮದಾಗಿಸಿಕೊಳ್ಳಬೇಕು ಅನ್ನೂ ಕನಸಿತ್ತು. ಅದಕ್ಕಾಗಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು. ಆದರೆ, ದಂಪತಿ ಟಾನ್ಸ್ಜೆಂಡರ್ ಆಗಿರುವ ಕಾರಣ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು. ಹೀಗಿದ್ದೂ ಸಹದ್‌ಗೆ ಗಂಡಾಗಿದ್ದರೂ ಗರ್ಭಿಣಿಯಾಗುವ ಯೋಚನೆ ಬಂದಿತು.

‘ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿಯುತ್ತಿದೆ ಅಲ್ಲದೆ ಒಮ್ಮೆ ಕೈಬಿಟ್ಟ ಪ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಜಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ನಿರ್ಧಾರವನ್ನೇ ಬದಲಿಸಿತು’ ಎಂದು ಸಹದ್ ಹೇಳಿದರು.

ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ದಂಪತಿಗೆ ಚಿಕಿತ್ಸೆ ಆರಂಭಿಸಲಾಯಿತು ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಲಾಗಿಲ್ಲ.

ಸದ್ಯಕ್ಕೆ ಹಾಲಿನ ಬ್ಯಾಂಕ್ ಮೂಲಕ ಮಗುವಿಗೆ ಹಾಲುಣಿಸಲು ದಂಪತಿ ನಿರ್ಧರಿಸಲಾಗಿದೆ. ಜಿಯಾ ಓರ್ವ ನರ್ತಕಿಯಾಗಿದ್ದು ಜಹಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಕೆಲಸ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read