ತಿರುವನಂತಪುರ: ಕೇರಳದ ಗ್ರಾಮಾಂತರದ ವರ್ಕಲಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಪುರುಷ ಮತ್ತು ಮಹಿಳೆ ಇಬ್ಬರೂ ಹೈಮಾಸ್ಟ್ ಲೈಟ್ ಕಂಬಕ್ಕೆ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಇಬ್ಬರು ಪ್ರವಾಸಿಗರು ವರ್ಕಳದ ಪಾಪನಾಶಂ ಬೀಚ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಂಬದಲ್ಲಿ ಸಿಲುಕಿಕೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಇಬ್ಬರನ್ನೂ ರಕ್ಷಿಸಿದ್ದಾರೆ. ಪುರುಷ ಮತ್ತು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರೂ ಕಂಬಕ್ಕೆ ಸಿಲುಕಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಸೂಕ್ತ ತರಬೇತಿ ಇಲ್ಲದೇ ಹೋದರೆ ಹೀಗೆ ಎಡವಟ್ಟು ಆಗುತ್ತದೆ ಎಂದು ಹಲವರು ಹೇಳುತ್ತಿದ್ದರೆ, ಕೆಲವೊಮ್ಮೆ ಎಷ್ಟೇ ತರಬೇತಿ ಇದ್ದರೂ ಗ್ರಹಚಾರ ಕೆಟ್ಟಾಗ ಹೀಗೆಲ್ಲಾ ಆಗುತ್ತದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
https://twitter.com/ANI/status/1633104103671832581?ref_src=twsrc%5Etfw%7Ctwcamp%5Etweetembed%7Ctwterm%5E1633104103671832581%7Ctwgr%5E133dc21cb61d82205bb30d91de129086236c36ba%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fkerala-man-woman-stuck-on-high-mast-pole-while-paragliding-watch-2343820-2023-03-07