ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಗ್ಸ್ ನುಂಗಿದ ವ್ಯಕ್ತಿ ಸಾವು

ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ನಲ್ಲಿ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಎರಡು ಪ್ಯಾಕೆಟ್ ಎಂಡಿಎಂಎ ಡ್ರಗ್ಸ್ ನುಂಗಿ ಸಾವನ್ನಪ್ಪಿದ್ದಾನೆ.

ಇಯ್ಯದನ್ ಶಾನಿದ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೋಯಿಕ್ಕೋಡ್ ನ ಻ಂಬಾಯಥೋಡ್ ಪ್ರದೇಶದಲ್ಲಿ ವ್ಯಾಪಕವಾಗಿ ಡ್ರಗ್ಸ್ ಸಾಗಣೆ  ಮತ್ತು ಬಳಕೆ ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ಕಾರ್ಯ ಕೈಗೊಂಡಿದ್ದಾರೆ.

ಅದೇ ಮಾರ್ಗದಲ್ಲಿ ಬಂದ ಇಯ್ಯದನ್ ಶಾನಿದ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡೊಡನೆ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಳಿ ಇದ್ದ ಎರಡು ಪ್ಯಾಕೆಟ್ ಎಂಡಿಎಂಎ ಮಾದಕ ದ್ರವ್ಯ ನುಂಗಿದ್ದಾನೆ. ಇದರಿಂದ ಆತ ಮೃತಪಟ್ಟಿದ್ದಾನೆ.

ಶಾನಿದ್‌ ನನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಪ್ಯಾಕೆಟ್‌ ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದಾಗ್ಯೂ, ಶಾನಿದ್ ಸ್ಥಿತಿ ಹದಗೆಟ್ಟಿದ್ದು, ಸಾವನ್ನಪ್ಪಿದ್ದಾನೆ. ತನಿಖೆ ನಡೆಯುತ್ತಿದೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾನಿದ್ ಸಾವಿಗೆ ಮುನ್ನ, ಪೊಲೀಸರು ಅವರ ವಿರುದ್ಧ ಎಂಡಿಎಂಎ ಹೊಂದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read