ತಿರುವನಂತಪುರಂ:ಇಲ್ಲಿನ ವೆಂಜರಮೂಡು ಬಳಿ ಸೋಮವಾರ 23 ವರ್ಷದ ವ್ಯಕ್ತಿಯೊಬ್ಬ ತನ್ನ 13 ವರ್ಷದ ಸಹೋದರ, 80 ರ ಹರೆಯದ ಅಜ್ಜಿ ಮತ್ತು ತನ್ನ ಪ್ರೇಯಸಿ ಎಂದು ಹೇಳಲಾದ ಯುವತಿಯನ್ನು ಒಳಗೊಂಡಂತೆ ಆರು ಜನರನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಅಫಾನ್ ಎಂದು ಗುರುತಿಸಲಾದ ವ್ಯಕ್ತಿ ವಿಷ ಸೇವಿಸಿದ್ದಾನೆ ಎಂದು ಹೇಳಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಐದು ಜನರ ಸಾವನ್ನು ದೃಢಪಡಿಸಿದರೆ, ಅಫಾನ್‌ನಿಂದ ಹಲ್ಲೆಗೊಳಗಾದ ಆತನ ತಾಯಿಯನ್ನು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ.
ಸತ್ತವರಲ್ಲಿ ಇಬ್ಬರು ಆತನ ಹತ್ತಿರದ ಸಂಬಂಧಿಕರು – ಆತನ ತಂದೆಯ ಚಿಕ್ಕಪ್ಪ ಮತ್ತು ಆತನ ಹೆಂಡತಿ ಎಂದು ವರದಿಯಾಗಿದೆ.
ರಾಜ್ಯ ರಾಜಧಾನಿ ಬಳಿಯ ವೆಂಜರಮೂಡು ಪ್ರದೇಶದ ಮೂರು ಮನೆಗಳಲ್ಲಿ ಈ ಸಾಮೂಹಿಕ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿ ತಪ್ಪೊಪ್ಪಿಗೆ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ, ಆಘಾತಕಾರಿ ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.