ತಿರುವನಂತಪುರಂ: ಕೇರಳದ ದೇವಾಲಯವೊಂದರಲ್ಲಿ ದೇವರ ಉತ್ಸವದ ವೇಳೆ ಪಟಾಕಿ ಸದ್ದಿಗೆ ರೊಚ್ಚಿಗೆದ್ದ ಆನೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಸ್ಥಾನದಲ್ಲಿ ಆನೆದಾಳಿಯಿಂದ ಕಾಲ್ತುಳಿತವುಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ದೇವಾಲಯದ ಉತ್ಸವಕ್ಕೆಂದು ಆನೆಗಳನ್ನು ತರಲಾಗಿತ್ತು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಪಟಾಕಿ ಸದ್ದಿಗೆ ಎರಡು ಆನೆಗಳು ಅಡ್ಡಾದಿಡ್ದಿಯಾಗಿ ಚಲಿಸಲಾರಂಭಿಸಿವೆ. ಪರಿಣಾಮ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿದೆ.
ನೂಕು ನುಗ್ಗಲಿನಿಂದ ಕಾಲ್ತುಳಿತ ಸಭವಿಸಿದ್ದು, ಮೂವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಟಾಕಿ ಸದ್ದಿಗೆ ಗಾಬರಿಯಾದ ಆನೆಗಳು ದೇವಸ್ಥಾನದ ಗೋಡೆಗೆ ಗುದ್ದಿದ ಪರಿಣಾಮ ಗೋಡೆಯ ಒಂದು ಭಾಗ ಕುಸಿದುಬಿದ್ದಿದೆ ಎಂದು ತಿಳಿದುಬಂದಿದೆ.