ಕೇರಳ ಸಿಎಂ ಪುತ್ರಿ ವೀಣಾ ವಿಜಯನ್‌ಗೆ ಸಂಕಷ್ಟ ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಅನುಮತಿ !

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರು ಆರ್ಥಿಕ ವಂಚನೆ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದೆ. ವೀಣಾ ವಿಜಯನ್ ಅವರು ಸಿಎಂಆರ್‌ಎಲ್ ಎಂಬ ಕಾರ್ಪೊರೇಟ್ ಸಂಸ್ಥೆಯಿಂದ ಕಾನೂನು ಬಾಹಿರವಾಗಿ 2.70 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಯಾವುದೇ ಸೇವೆ ನೀಡದೆಯೇ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬುದು ವೀಣಾ ಅವರ ಮೇಲಿನ ಗಂಭೀರ ಆರೋಪವಾಗಿದೆ.
ಈ ಪ್ರಕರಣದ ತನಿಖೆ ನಡೆಸಿದ ‘ಎಸ್‌ಎಫ್‌ಐಓ’ (ಸೀರಿಯಸ್ ಫ್ರಾಡ್ ಇನ್‌ವೆಸ್ಟಿಗೇಷನ್ ಆಫೀಸ್) ವರದಿಯ ಆಧಾರದ ಮೇಲೆ, ವೀಣಾ ವಿಜಯನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅನುಮತಿ ನೀಡಿದೆ. ಈ ಬೆಳವಣಿಗೆಯು ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read